ಫೇಸ್ ಬುಕ್ ಬಳಸದಿದ್ದರೆ ಆನಂದವಾಗಿರುವಿರಿ-ಅಧ್ಯಯನ

ಫೇಸ್‌ಬುಕ್ ಅದೊಂದು ಮಾಯಾ ಜಾಲ, ಒಮ್ಮೆ ಇಲ್ಲಿ ಸಿಲುಕಿಕೊಂಡರೆ ಹೊರ ಬರುವುದು ಅದೇಷ್ಟು ಕಷ್ಟ ಎಂದು ಎಲ್ಲರಿಗೂ ತಿಳಿದಿದೆ. ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಎಲ್ಲಾ ವಯೋಮಾನದ ಜನರು ಫೇಸ್‌ಬುಕ್ ಎನ್ನುವ ಅಫೀಮಿಗೆ ಒಳಗಾಗಿದ್ದಾರೆ. ಸದಾ ಫೇಸ್‌ಬುಕ್ ನಲ್ಲಿರುವ ಜನರು ತಮ್ಮ ಪಕ್ಕ ಏನು ನಡೆಯುತ್ತಿದೆ ಎಂದು ಕೂಡಾ ಪರಿಜ್ಞಾನ ಇಲ್ಲದಷ್ಟು ಅದರೊಳಗೆ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಈ ರೀತಿ ಫೇಸ್‌ಬುಕ್ ಗೆ ಅಡಿಕ್ಟ್ ಆಗಿರುವ ಜನರಿಗೆ ಅಮೇರಿಕಾದಿಂದ ಒಂದು ಶಾಕಿಂಗ್ ನ್ಯೂಸ್ ಹೊರ ಬಂದಿದೆ. ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯ ಹೊಸ ಸಂಶೋಧನೆಯೊಂದನ್ನ ನಡೆಸಿದ್ದು ದಿನ ನಿತ್ಯ ಫೇಸ್‌ಬುಕ್ ಬಳಸುವ ವ್ಯಕ್ತಿಗಳು ತಮ್ಮ ಆನಂದವನ್ನು ಕಳೆದುಕೊಳ್ಳುತ್ತಿದ್ದಾರಂತೆ.

ಸಂಶೋಧನೆಯ ಪ್ರಕಾರ ಫೇಸ್‌ಬುಕ್ ಬಳಸುವ ವ್ಯಕ್ತಿಗಳಿಗಿಂತ, ಬಳಸದೆ ಇರುವ ವ್ಯಕ್ತಿಗಳು ಹೆಚ್ಚು ಆನಂದವಾಗಿರಬಲ್ಲರು ಎಂದು ಸಂಶೋಧಕರು ಹೇಳಿದ್ದಾರೆ. ಸದಾ ಫೇಸ್‌ಬುಕ್ ನಲ್ಲಿರುವ ವ್ಯಕ್ತಿಗಳು ತಮ್ಮ ಸುತ್ತಲಿನ ಪ್ರಪಂಚದ ಪರಿಜ್ಞಾನ ಇಲ್ಲದಂತೆ ಬದುಕುತ್ತಿದ್ದು, ಸುತ್ತಲಿನ ವಾಸ್ತವಿಕ ಜಗತ್ತು ಮತ್ತು ಸಣ್ಣಪುಟ್ಟ ಖುಷಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಫೇಸ್‌ಬುಕ್ ಸೇರಿ ಸಾಮಾಜಿಕ ಮಾಧ್ಯಮಗಳನ್ನು ಬಿಟ್ಟವರು ತಮ್ಮ‌ ಕುಟುಂಬ ಹಾಗೂ ಗೆಳೆಯರು ಎಂದು ನೈಜ ಬದುಕಿಗೆ ಹತ್ತಿರವಾಗಿದ್ದು, ಅವರ ಖುಷಿ ಇತರರಿಗಿಂತ ಹೆಚ್ಚಾಗಿದೆ. ಅಲ್ಲದೆ ಅವರು ವಿದ್ಯಾಭ್ಯಾಸ, ಓದು ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಗುರುತಿಸಿಕೊಳ್ಳುವ ಹಂಬಲದಲ್ಲಿ ಇರುತಾರೆ ಎಂದು ಒಂದು ತಿಂಗಳ ಕಾಲ ನಡೆಸಿದ ಸಂಶೋಧನಾ ವರದಿ ಹೇಳಿದೆ.

Leave a Reply

Your email address will not be published. Required fields are marked *