ಯೋಗದಿಂದ ರೋಗ ಮಾಯಾ..! ಅದ್ಹೇಗೆ ಅಂತೀರಾ..? ಇಲ್ಲಿವೆ ಅಚ್ಚರಿ ಸಂಗತಿಗಳು

ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬಂದರೆ ಮಾತ್ರೆಗಳಿಗೆ ಮೊರೆ ಹೋಗುವುದು ಮಾಮೂಲಿ. ಆದ್ರೇ, ಇದರಿಂದ ಆಗುವ ಅಡ್ಡಪರಿಣಾಮಗಳು ದೇಹದ ಮೇಲೆ ಪ್ರಭಾವ ಬೀರುತ್ತವೆ. ಆದರೆ, ಪ್ರತಿನಿತ್ಯ ಯೋಗಸಾನ ಮಾಡೋದ್ರಿಂದ ಹಲವು ರೋಗಗಳನ್ನು ತಡೆಯಬಹುದಾಗಿದೆ. ಆ ಯೋಗಾಸನಗಳು ಯಾವುವು, ಯಾವ ರೋಗಗಳನ್ನ ಕಡಿಮೆ ಮಾಡುತ್ತೆ ಅಂತೀರಾ, ಇಲ್ಲಿವೆ ನೋಡಿ.

ಕೆಮ್ಮು ಮತ್ತು ಶೀತ : ಕೆಮ್ಮು ಹಾಗೂ ಶೀತ ಇದ್ದರೆ ಉತ್ಕಟಾಸನದ ಉಸಿರಾಟ, ಪವನ ಮುಕ್ತಾಸನ, ಭುಜಂಗಾಸನದ ಉಸಿರಾಟ ಮಾಡಬೇಕು. ಕಪಾಲಭಾತಿ, ಜಲನೇತಿ, ಸೂತ್ರನೇತಿ, ವಮನ ಧೌತಿ ಮತ್ತು ವಸ್ತ್ರ ಧೌತಿ ಜತೆ ಭಸ್ತ್ರಿಕಾ ಮಾಡಿ. ಮುಖಕ್ಕೆ ಹಬೆಯನ್ನು ದಿನಕ್ಕೆ 2 ರಿಂದ 3 ಬಾರಿ 10ನಿಮಿಷಗಳ ಕಾಲ ತೆಗೆದುಕೊಳ್ಳಬೇಕು. ಬೆಚ್ಚನೆಯ ನೀರಿನ ಕುತ್ತಿಗೆ ಪಟ್ಟಿಯು ಬಹಳ ಉಪಯುಕ್ತ. ಕೆಮ್ಮು ಹೆಚ್ಚಿದ್ದ ಸಮಯದಲ್ಲಿ ಬೆಚ್ಚನೆಯ ಎದೆಪಟ್ಟಿ ಬಳಸಿ. ಅಲ್ಲದೇ, ಕಷಾಯದ ಸೇವನೆ ಮಾಡುವುದು ಒಳ್ಳೆಯದು. ತುಳಸಿ ಕಷಾಯ, ಶುಂಠಿ ಕಷಾಯ ಇತ್ಯಾದಿ. ಲವಂಗ, ತುಳಸಿ ಬಾಯಿಯಲ್ಲಿಟ್ಟು ರಸವನ್ನು ನುಂಗಿದರೆ ಒಳ್ಳೆಯ ಅನುಭವ ಸಿಗುತ್ತದೆ.

ಎದೆ ಉರಿ : ಎದೆ ಉರಿಗೆ ಶೀತಲಿಕರಣ ವ್ಯಾಯಾಮದ ಅಭ್ಯಾಸವನ್ನು ಮಾಡಿದರೆ ಎದೆ ಉರಿ ಕಡಿಮೆಗೊಳ್ಳುತ್ತದೆ. ಆಸನಗಳಲ್ಲಿ ಮುಖ್ಯವಾಗಿ ತ್ರಿಕೋನಾಸನ, ಉತ್ತಿತ್ತ ಪಾದಾಸನ, ಪವನಮುಕ್ತಾಸನ, ಭುಜಂಗಾಸನ, ವಜ್ರಾಸನ ಸಹಾಯಕ. ಎಲ್ಲ ಕೃತಕ ಆಹಾರ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳು, ಬೇಕರಿ ತಿಂಡಿಗಳು ಇತ್ಯಾದಿಗಳನ್ನು ತ್ಯಜಿಸಬೇಕು. ಎದೆ ಉರಿಯ ಸಮಯದಲ್ಲಿ ಮಂಜುಗಡ್ಡೆಯ ನೀರನ್ನು ಕುಡಿಯುವುದರ ಜತೆ ತಣ್ಣೀರಿನ ಹೊಟ್ಟೆಯ ಪಟ್ಟಿ ಬಳಸಬೇಕು. ಮಣ್ಣಿನ ಲೇಪನ ಅಥವಾ ಮಣ್ಣಿನ ಪಟ್ಟಿ ಕೂಡ ಒಳ್ಳೆಯದು. ದಿನಕ್ಕೆ ಒಂದು ಬಾರಿ ಕಟ್ಟಿ ಸ್ನಾನದ ಅಭ್ಯಾಸ ರೂಢಿಸಿಕೊಳ್ಳಿ. ಬೂದುಗುಂಬಳಕಾಯಿ, ಕ್ಯಾರೆಟ್, ಸೊರೆಕಾಯಿ, ಕಲ್ಲಂಗಡಿ, ಕರಬೂಜ ರಸವನ್ನು ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ತೆಗೆದುಕೊಳ್ಳಿ. ಜೀರಿಗೆ ಕಷಾಯವು ಉಪಯುಕ್ತ.

ಅಜೀರ್ಣ : ಅಜೀರ್ಣ ಸಮಸ್ಯೆ ಇರುವವರು ಪ್ರತಿ ದಿನ ಯೋಗಾಭ್ಯಾಸವನ್ನು ಅಭ್ಯಾಸಿಸುವುದು ಒಳ್ಳೆದು. ಅದರಲ್ಲೂ ಮುಖ್ಯವಾಗಿ ಶವಾಸನ, ವಜ್ರಾಸನ ರೂಢಿಸಿಕೊಳ್ಳಬೇಕು. ಜಲನೇತಿ, ಸೂತ್ರನೇತಿ ಕ್ರಿಯೆ ಜತೆ ನಾಡಿ ಶೋಧನ, ಭ್ರಾಮರಿ ಮಾಡಿ. ಶುಂಠಿ ಕಷಾಯವನ್ನು ಬೆಳಗಿನ ಸಮಯದಲ್ಲಿ ತೆಗೆದುಕೊಳ್ಳುವುದರ ಜತೆ ಆಹಾರದಲ್ಲಿ ಹೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬೇಕು.

ಜ್ವರ : ಜ್ವರ ಬಂದಾಗ ಹೆಚ್ಚು ನೀರು ಕುಡಿಯುವುದು ಸೂಕ್ತ. ತಣ್ಣೀರಿನ ಒದ್ದೆಯ ಬಟ್ಟೆಯಿಂದ ಮೈಯನ್ನು ಒರೆಸಿಕೊಳ್ಳಬೇಕು. ಸಂಪೂರ್ಣವಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುವುದರಿಂದ ಚೈತನ್ಯ ಬರುತ್ತದೆ. ಹಣ್ಣಿನ ರಸಗಳು, ಎಳನೀರು, ಗಂಜಿ, ತರಕಾರಿಗಳನ್ನು ಹೆಚ್ಚು ಸೇವಿಸುವುದು ಒಳಿತು.

Leave a Reply

Your email address will not be published. Required fields are marked *