ಯೋಗ ದಿನದಂದು ವಿಶ್ವ ದಾಖಲೆ ಬರೆಯಲು ಸಜ್ಜಾಗುತ್ತಿದೆ ಮೈಸೂರು

ಮೈಸೂರು : ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಂದು ಮತ್ತೊಂದು ವಿಶ್ವದಾಖಲೆಗೆ ಬರೆಯಲು ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದೆ. ಕಳೆದ ವರ್ಷ 55,506 ಮಂದಿ ಸೇರಿ ಒಟ್ಟಾಗಿ ಯೋಗ ಕಾರ್ಯಕ್ರಮವನ್ನು ನಡೆಸಿದ್ದರು. ಈ ವರ್ಷ ಅದೇ ರೇಸ್ ಕೋರ್ಸ್ ಆವರಣದಲ್ಲಿ ಒಂದೂವರೆ ಲಕ್ಷ ಮಂದಿಯನ್ನು ಸೇರಿಸಿ ಗಿನ್ನಿಸ್ ದಾಖಲೆ ನಿರ್ಮಿಸುವ ಯೋಜನೆ ರೆಡಿಯಾಗಿದೆ. ಜಿಲ್ಲಾಡಳಿತ ಹಾಗೂ ಸುತ್ತೂರು ಮಠ ಯೋಗ ದಿನದ ಉಸ್ತುವಾರಿ ವಹಿಸಿಕೊಳ್ಳಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಅಲ್ಲದೇ 1,100 ಯೋಗ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಮನೆಗಳು, ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಮಾಡಿ ಯೋಗಾಸಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವಂತೆ ಸಿದ್ಧತೆ ನಡೆಸಲಾಗುತ್ತಿದೆ.

ಮೈಸೂರಿನ ವಿವಿಧ ಕಡೆಗಳಲ್ಲಿಯೂ ಯೋಗ ಪಟುಗಳ ಪೂರ್ವಾಭ್ಯಾಸಗಳು ನಡೆಯುತ್ತಿದ್ದು, ಮುಂದಿನ ಐದು ಭಾನುವಾರಗಳೂ ಈ ಪೂರ್ವಾಭ್ಯಾಸಗಳು ನಡೆದು, ಅಂತಾರಾಷ್ಟ್ರೀಯ ಯೋಗ ದಿನಕ್ಕೂ ಮುನ್ನ ಮೈಸೂರು ಅರಮನೆ ಮತ್ತು ರೇಸ್ ಕೋರ್ಸ್ ಮೈದಾನದಲ್ಲಿ ಅಂತಿಮ ಪೂರ್ವಾಭ್ಯಾಸ ನಡೆಸಲು ಯೋಜನೆ ರೂಪಿಸಲಾಗಿದೆ.

ಈಗಾಗಲೇ 1,100 ಯೋಗ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಅವರು ಶಾಲಾ-ಕಾಲೇಜು, ಸಂಘ ಸಂಸ್ಥೆಗಳು, ದೊಡ್ಡ ದೊಡ್ಡ ಕಂಪೆನಿಗಳಿಗೆ ಹೋಗಿ ಯೋಗ ದಿನದಂದು ಯೋಗ ಪ್ರದರ್ಶನದಲ್ಲಿ ಭಾಗವಹಿಸುವಂತೆ ಮಾಡಲಾಗುವುದು. ಈ ಬಾರಿ 1.50 ಲಕ್ಷದಷ್ಟು ಯೋಗಪಟುಗಳು ಭಾಗವಹಿಸಿ, ವಿಶ್ವ ದಾಖಲೆ ಮಾಡುವ ಪ್ರಯತ್ನ ನಡೆಯುತ್ತಿದೆ.

Leave a Reply

Your email address will not be published. Required fields are marked *