ವಿಶ್ವಕಪ್ ಸಮರ : ಇಂದು ಭಾರತಕ್ಕೆ ಬಾಂಗ್ಲಾ ಸವಾಲ್

ಬರ್ಮಿಂಗ್ ಹ್ಯಾಮ್ : ವಿಶ್ವಕಪ್ ನಲ್ಲಿಂದು ಭಾರತ ಹಾಗೂ ಬಾಂಗ್ಲಾದೇಶಗಳು ತಂಡಗಳು ಮುಖಾಮುಖಿಯಾಗಲಿವೆ. ಕಳೆದ ಪಂದ್ಯದಲ್ಲಿ ಸೋಲನ್ನುಭವಿಸಿದ ಕೊಹ್ಲಿ ಪಡೆ ಇಂದಿನ ಪಂದ್ಯದಲ್ಲಿ ಗೆದ್ದು ಸೆಮೀಸ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ತವಕದಲ್ಲಿದೆ. ಇತ್ತ ಬಾಂಗ್ಲಾ ಕೂಡ ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಪಂದ್ಯ ಗೆಲ್ಲಲ್ಲೇಬೇಕಾದ ಒತ್ತಡದಲ್ಲಿ ಸಿಲುಕಿದೆ. ಹೀಗಾಗಿ ಉಭಯ ತಂಡಗಳಿಗೂ ಪಂದ್ಯ ಮಹತ್ವದ್ದಾಗಿದ್ದು, ಕೊಹ್ಲಿ ಪಡೆಯೆ ಗೆಲ್ಲುವ ಫೆವರೀಟ್ ಎನಿಸಿದರೂ, ಅಚ್ಚರಿಯ ಫಲಿತಾಂಶ ಕೊಡುವುದರಲ್ಲಿ ಬಾಂಗ್ಲಾ ಆಟಗಾರರು ನಿಪುಣರಾಗಿದ್ದಾರೆ.

Leave a Reply

Your email address will not be published. Required fields are marked *