ವಿಶ್ವಕಪ್ ಸಮರ : ಇಂದು ಇಂಗ್ಲೆಂಡ್-ಕಿವೀಸ್ ಗೆ ನಿರ್ಣಾಯಕ ಪಂದ್ಯ

ಚೆಸ್ಟರ್ ಲೀ ಸ್ಟ್ರೀಟ್ : ವಿಶ್ವಕಪ್ ಲೀಗ್ ನ ಕೊನೆಯ ಪಂದ್ಯವನ್ನು ಆಡುತ್ತಿರುವ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಇಂದು ಪರಸ್ಪರ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಸೆಮೀಸ್ ಆಸೆಯನ್ನು ಖಚಿತಪಡಿಸಿಕೊಳ್ಳೊಕೆ ಪಣತೊಟ್ಟಿದ್ದು, ಇಂದು ಹೈವೋಲ್ಟೆಜ್ ಕದನ ಏರ್ಪಡಲಿದೆ.

ಈಗಾಗಲೇ ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿರುವ ಎರಡು ತಂಡಗಳು ಒತ್ತಡದ ಪರಿಸ್ಥಿತಿಯಲ್ಲಿವೆ. ಗೆದ್ದ ತಂಡ ಸೆಮೀಸ್ ಸ್ಥಾನವನ್ನು ಖಚಿತಪಡಿಸಿಕೊಂಡರೆ, ಸೋತ ತಂಡ ಮುಂದಿನ ಪಂದ್ಯದಲಿ ಪಾಕಿಸ್ತಾನ-ಬಾಂಗ್ಲಾ ನಡುವೆ ನಡೆಯುವ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ. ಅಲ್ಲಿ ಪಾಕ್ ಸೋತರೆ ನಿರಾಯಾಸವಾಗಿ ಸೆಮೀಸ್ ಗೆ ಏರಲಿದೆ. ಆದ್ರೆ ಪಾಕ್ ಗೆದ್ದರೆ ಸೆಮೀಸ್ ಆಸೆ ಕೈ ತಪ್ಪಲಿದೆ. ಹಾಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದ್ದು, ಬಿಗ್ ಫೈಟ್ ನಡೆಯುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *