ಚೊಚ್ಚಲ ವಿಶ್ವಕಪ್ ಕಿರೀಟಕ್ಕಾಗಿ ನ್ಯೂಜಿಲೆಂಡ್-ಇಂಗ್ಲೆಂಡ್ ನಡುವೆ ಬಿಗ್ ಫೈಟ್

ಲಂಡನ್ : ಏಕದಿನ ಕ್ರಿಕೆಟ್ ನ 12 ನೇ ವಿಶ್ವಕಪ್ ಸಮರದಲ್ಲಿ ಇಂದು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಕ್ರಿಕೆಟ್ ಇತಿಹಾಸದಲ್ಲೇ ಉಭಯ ತಂಡಗಳು ಇದುವರೆಗೂ ವಿಶ್ವಕಪ್ ಗೆದ್ದಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯೋ ತವಕದಲ್ಲಿ ಉಭಯ ತಂಡಗಳು ಇವೆ.

ಉಭಯ ತಂಡಗಳು ಸಮಬಲದಿಂದ ಕೂಡಿದ್ದು, ಮೆಲ್ನೋಟ್ಟಕ್ಕೆ ಇಂಗ್ಲೆಂಡ್ ಗೆಲ್ಲುವ ಫೇವರೀಟ್ ಎನಿಸಿದೆ. ಆದರೂ ಸೆಮೀಸ್ ನಲ್ಲಿ ಟೀಮ್ ಇಂಡಿಯಾವನ್ನೇ ಮಣಿಸಿದ ನ್ಯೂಜಿಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಕಳೆದ ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ಫೈನಲ್ ನಲ್ಲಿ ಎಡವಿ ರನ್ನರಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದ್ರೀಗ ಮತ್ತೊಮ್ಮೆ ಫೈನಲ್ ಗೆ ಲಗ್ಗೆ ಇಟ್ಟಿರೋದ್ರಿಂದ ನಿರೀಕ್ಷೆಗಳು ಹೆಚ್ಚಾಗಿವೆ.    

Leave a Reply

Your email address will not be published. Required fields are marked *