ಜಗತ್ತಿನ ಮೊದಲ 32 ಎಂಪಿ ಫ್ರಂಟ್ ಕ್ಯಾಮರಾ ಪೋನ್ ಬಿಡುಗಡೆ

ಜಗತ್ತಿನ ಮೊದಲ 32 ಎಂಪಿ ಫ್ರಂಟ್ ಕ್ಯಾಮರಾ ಪೋನ್ ಅನ್ನ ಭಾರತದಲ್ಲಿ ಚೀನಾ ಕಂಪನಿ ವಿವೋ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿ-15 ಪ್ರೊ ಸ್ಮಾಟ್ ಪೋನ್ ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಈ ಫೋನ್ ನಲ್ಲಿ ಹೊಸ ಪಾಪ್-ಅಪ್ ಸೆಲ್ಫಿ ಕ್ಯಾಮರಾವನ್ನ ನೀಡಲಾಗಿದೆ. ಜೊತೆಗೆ ಹಿಂದೆ ಮೂರು ರಿಯರ್ ಕ್ಯಾಮರಾ ಅಳವಡಿಸಲಾಗಿದೆ.

ವಿ-15 ಪ್ರೊ ಸ್ಮಾರ್ಟ್ ಪೋನ್ ಬೆಲೆ ಸ್ವಲ್ಪ ದುಬಾರಿನೇ, ಭಾರತದಲ್ಲಿ ವಿ-15 ಪ್ರೊ ಸ್ಮಾರ್ಟ್ ಪೋನ್ 28,990 ರೂಪಾಯಿಗೆ ಸಿಗಲಿದೆ. ಇಂದಿನಿಂದಲೇ ಮೊಬೈಲ್ ಬುಕ್ಕಿಂಗ್ ಶುರುವಾಗಿದ್ದು, ಮಾರ್ಚ್ 6 ರಿಂದ ಮೊಬೈಲ್ ನಿಮ್ಮ ಕೈಗೆ ಸಿಗಲಿದೆ. ಕಂಪನಿ ಪ್ರಕಾರ, ವಿಶ್ವದ ಮೊದಲ 32 ಎಂಬಿ ಫ್ರಂಟ್ ಕ್ಯಾಮರಾ ಹೊಂದಿರುವ ಪೋನ್ ಇದಾಗಿದೆಯಂತೆ.

ಇನ್ನೂ, ಈ ಮೊಬೈಲ್ ನಾ ವೈಶಿಷ್ಟತೆಯನ್ನ ನೋಡೋದಾದ್ರೆ, 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್ ಸ್ಟೋರೆಜ್ ಅನ್ನ ಒಳಗೊಂಡಿದೆ. ಜೊತೆಗೆ Qualcomm Snapdragon 675 ಪ್ರೊಸೆಸರ್, 6.39 ಇಂಚಿನ ಡಿಸ್ಪ್ಲೇ ಇರುವ ವಿ-15 ಮೊಬೈಲ್ 3,700 mAh ಬ್ಯಾಟರಿಯನ್ನ ಹೊಂದಿದೆ.

Leave a Reply

Your email address will not be published. Required fields are marked *