ವಿಶ್ವ ಪರಿಸರ ದಿನಾಚರಣೆ : ಸ್ವಚ್ಛತಾ ಜಾಥಾ ರಥಕ್ಕೆ ಬಾಲಚಂದ್ರನ್ ಅವರಿಂದ ಚಾಲನೆ

ಕೊಪ್ಪಳ : ಸ್ಚಚ್ಛ ಮೇವ ಜಯತೆ ಕಾರ್ಯಕ್ರಮ ಮತ್ತು ಜಲಾಮೃತ ಜನಾಂದೋಲನ, ವಿಶ್ವ ಪರಿಸರ ದಿನಾಚರಣೆ ಹಾಗೂ ಸ್ವಚ್ಛತಾ ಜಾಥಾ ರಥಕ್ಕೆ ತಾಲೂಕ ಪಂಚಾಯತಿಯ ಅಧ್ಯಕ್ಷ ಬಾಲಚಂದ್ರನ್ ಚಾಲನೆ ನೀಡಿದರು. ಕೊಪ್ಪಳ ತಾಲೂಕ ಪಂಚಾಯತ್ ವತಿಯಿಂದ ಸ್ಚಚ್ಛ ಮೇವ ಜಯತೆ ಕಾರ್ಯಕ್ರಮ ಮತ್ತು ಜಲಾಮೃತ ಜನಾಂದೋಲನ, ವಿಶ್ವ ಪರಿಸರ ದಿನಾಚರಣೆ ಹಾಗೂ ಸ್ವಚ್ಛತಾ ಜಾಥಾ ಕಾರ್ಯಕ್ರಮವನ್ನು ತಾ.ಪಂ. ಆವರಣದಲ್ಲಿ ಮಂಗಳವಾರದಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಡಾ.ಗಿರೀಶ್ ಕಾರ್ನಡರವರು ನಿಧನರಾದ ನಿಮಿತ್ಯ ಎಲ್ಲರೂ ಮೌನಾಚರಣೆ ಮಾಡಲಾಯಿತು. ತಾಲೂಕ ಪಂಚಾಯತ ಸಭಾಂಗಣದಲ್ಲಿ ಸ್ಚಚ್ಛ ಮೇವ ಜಯತೆ ಕಾರ್ಯಕ್ರಮ ಮತ್ತು ಜಲಾಮೃತ ಜನಾಂದೋಲನ ಹಾಗೂ ವಿಶ್ವ ಪರಿಸರ ದಿನಾಚರಣೆ ಹಾಗೂ ಸ್ವಚ್ಛತಾ ಜಾಥಾ ರಥ ಚಾಲನೆ ನೀಡಿ ಆಚರಿಸಲಾಯಿತು. ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ವೈಯಕ್ತಕ ಸ್ವಚ್ಛತೆ, ಸಮುದಾಯದ ಸ್ವಚ್ಛತೆ ಹಾಗೂ ಪರಿಸರದ ಕಾಳಜಿಯನ್ನು ಹಾಗೂ ವೈಯಕ್ತಿಕ ಶೌಚಾಲಯಗಳ ಬಳಕೆ, ಘನ ತ್ಯಾಜ್ಯ ವಿಲೇವಾರಿ ಕುರಿತು ಹಾಗೂ ಎರಡು ಗುಂಡಿ ಶೌಚಾಲಯಗಳ ನಿರ್ಮಾಣ ಮತ್ತು ಪ್ರಾಮುಖ್ಯತೆ ಹಾಗೂ ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಸ್ವಚ್ಛತೆ, ಸಮುದಾಯದ ಸ್ವಚ್ಛತೆ ಹಾಗೂ ಪರಿಸರದ ಕಾಳಜಿ ಮತ್ತು ನೀರಿನ ಮಹತ್ವ & ಜಲವನ್ನು ಸಂರಕ್ಷಿಸುವ ಅಂಶಗಳನ್ನು ಇಟ್ಟುಕೊಂಡು, ಜರುಗಿಸಿದ ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ಮತ್ತು ಜನಾಂದೋಲನ ಹಾಗೂ ವಿಶ್ವ ಪರಿಸರ ದಿನಾಚರಣೆ ಹಾಗೂ ಜಲಾಮೃತ ಜನಾಂದೋಲನ ಹಾಗೂ ಸ್ವಚ್ಛ ಮೇವ ಜಯತೆ ಮಾಹಿತಿ ಜಾಥಾ ರಥಕ್ಕೆ ಚಾಲನೆ ನೀಡಿ ಸಾಂಕೇತಿಕವಾಗಿ ಆಚರಿಸಲಾಯಿತು.

ಸ್ವಚ್ಛ ಮೇವ ಜಯತೆಯ ಪ್ರತಿಜ್ನಾವಿಧಿಯನ್ನು ತಾ.ಪಂ.ಸಹಾಯಕ ನಿರ್ದೆಶಕ ಶರಣಯ್ಯ ಶಸಿಮಠ ಬೋಧಿಸಿದರು. ವಿಶ್ವ ಪರಿಸರ ದಿನಾಚರಣೆ ಹಾಗೂ ಜಲಾಮೃತ ಜನಾಂದೋಲನ ಆಚರಣೆ ನಿಮಿತ್ಯ ತಾಲೂಕ ಪಂಚಾಯತಿಯ ಆವರಣದಲ್ಲಿ ವಿವಿಧ ತಳಿಗಳ ಸಸಿಗಳನ್ನು ನೆಡುವ ಮೂಲಕ ಸ್ವಚ್ಛ ಮೇವ ಜಯತೆ ಕಾರ್ಯಕ್ರಮವನ್ನು ಹಾಗೂ ವಿಶ್ವ ಪರಿಸರ ದಿನಾಚರಣೆ ಅನುಷ್ಟಾನ ಮಾಡಲಾಯಿತು.  

Leave a Reply

Your email address will not be published. Required fields are marked *