ವಿಶ್ವಕಪ್ ನಲ್ಲಿ ವಿಶೇಷ ಶೂ ಧರಿಸಲಿದ್ದಾರೆ ವಿರಾಟ್..!

ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಗೆ ಸಜ್ಜಾಗಿರುವ ಟೀಮ್ ಇಂಡಿಯಾ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದು, ಈ ಬಾರಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  ಮೈದಾನದಲ್ಲಿ ವಿಶೇಷ ಶೂ ಧರಿಸಿಕೊಂಡು ಕಣಕ್ಕಿಳಿಯಲಿದ್ದಾರಂತೆ.

ಹೌದು, ಈ ಬಗ್ಗೆ ಟ್ವಿಟರ್ ನಲ್ಲಿ ಸ್ವತಃ ವಿರಾಟ್ ಕೊಹ್ಲಿಯೆ ವಿಡಿಯೋ ಸಹಿತ ಮಾಹಿತಿ ನೀಡಿದ್ದಾರೆ. ವಿಶ್ವಕಪ್ ಗಾಗಿ ವಿರಾಟ್ ಬಿಳಿ ಮತ್ತು ಚಿನ್ನದ ಬಣ್ಣದ ವಿಶೇಷ ಪೂಮಾ ಕಂಪನಿಯ ಶೂ ಧರಿಸಲಿದ್ದಾರೆ.

ಗೋಲ್ಡನ್ ಕಲರ್ ಕೊಹ್ಲಿ ಫೇವರಿಟ್ ಕಲರ್ ಆಗಿದ್ದು, ಈ ವಿಶೇಷ ಶೂ ವಿಶ್ವಕಪ್ ನಲ್ಲಿ ಆಕರ್ಷಣೆ ಕೇಂದ್ರ ಬಿಂದುವಾಗಲಿದೆ. ಈ ವಿಶೇಷ ಶೂಗಳನ್ನು ಧರಿಸಲು ನನಗೆ ಹೆಮ್ಮೆಯಾಗುತ್ತಿದೆ. ಇದು ಫಿಟ್ ನೆಸ್ ಮತ್ತು ಸ್ಟೈಲ್ ಗೆ ಹೊಸ ಕಳೆ ತರಲಿದೆ ಎಂದು ಕೊಹ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *