ವಿದ್ಯುತ್ ಅವಘಡ : ನಾಲ್ಕು ಮನೆಗಳು ಸಂಪೂರ್ಣ ಭಸ್ಮ

ಗಂಗಾವತಿ : ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಬೊಮ್ಮನಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ವಿದ್ಯುತ್ ಅವಘಡದಿಂದ ನಾಲ್ಕು ಮನೆಗಳು ಸಂಪೂರ್ಣ ಭಸ್ಮವಾಗಿರುವ ಘಟನೆ ನಡೆದಿದೆ. ಗ್ರಾಮದ ರಾಮಣ್ಣ ಬೇವಿನಗಿಡದ್, ಯಮನೂರ ಬೇವಿನಗಿಡದ್, ಶರಣಪ್ಪ ಹೂಗಾರ್, ಜಂಬಣ್ಣ ಎಂಬುವವರ ಮನೆಗಳು ಸಂಪೂರ್ಣ ಸುಟ್ಟುಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಸೋಮವಾರ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ವೈಯಕ್ತಿಕವಾಗಿ ಧನಸಹಾಯ ಮಾಡಿ, ಸರ್ಕಾರದಿಂದಲೂ ಪರಿಹಾರವನ್ನು ಕೊಡಿಸುವುದಾಗಿ ಹೇಳಿದರು.ಈ ವೇಳೆ ಊರಿನ ಮುಖಂಡರಾದ ಹನುಮಂತಪ್ಪˌ ಉದ್ದಾರˌ ಮಂಜುನಾಥ ಗೊಂದಿˌ ಜೀವಣ್ಣˌˌಶರಣಪ್ಪ ಇದ್ದರು.

Leave a Reply

Your email address will not be published. Required fields are marked *