ವಿದೇಶಿದಲ್ಲಿ ಗಾಯಗೊಂಡ ನಟ ವಿಶಾಲ್‍: ಟರ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ತಮಿಳು ನಟ ವಿಶಾಲ್‍ ವಿದೇಶದಲ್ಲಿ ಶೂಟಿಂಗ್ ವೇಳೆ ಬೈಕ್‍ನಿಂದ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಪಿ. ಸುಂದರ್ ನಿರ್ದೇಶನದ ಸಿನಿಮಾದಲ್ಲಿ ವಿಶಾಲ್‍ ಅಭಿನಯಿಸುತ್ತಿದ್ದು, ಚಿತ್ರದ ಶೂಟಿಂಗ್ ಟರ್ಕಿಯಲ್ಲಿ ನಡೆಯುತ್ತಿರುವಾಗ ಆಕ್ಷನ್ ಸೀನ್ ವೇಳೇ ವಿಶಾಲ್‍ ಆಯತಪ್ಪಿ ಬೈಕ್‍ನಿಂದ ಬಿದ್ದು ಎಡಗೈ, ಎಡಗಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ವಿಶಾಲ್‍ ಅವರ ಕೈ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡಿರುವ ಫೋಟೋ ಸೋಶಿಯಲ್‍ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಶಾಲ್‍ ಗಾಯಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಟ್ವಿಟರ್ ನಲ್ಲಿ ಫೋಟೋ ಟ್ಯಾಗ್ ಮಾಡಿ ಬೇಗ ಗುಣಮುಖರಾಗಿ ಅಂತಾ ಪ್ರಾರ್ಥಿಸುತ್ತಿದ್ದಾರೆ. ಇನ್ನು ವೈದ್ಯರು ವಿಶಾಲ್‍ ಗೆ ಎರಡು ವಾರ ವಿಶ್ರಾಂತಿ ತೆಗೆದುಕೊಳ್ಳಲು ತಿಳಿಸಿದ್ದು, ನಂತರ ಅವರು ಭಾರತಕ್ಕೆ ಬರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *