ಹಾಡಹಗಲೇ ಟಿಎಂಸಿ ಶಾಸಕನ ಬರ್ಬರ ಹತ್ಯೆ

ಪಶ್ಚಿಮ ಬಂಗಾಳದಲ್ಲಿ ಹಾಡಹಗಲೇ ಟಿಎಂಸಿ ಶಾಸಕರ ಕೊಲೆಯಾಗಿದೆ. ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಂತೆ ಇರುವ ನಾಡಿಯಾ ಜಿಲ್ಲೆಯ ಕೃಷ್ಣಗುಂಜ್‌ನಲ್ಲಿ ಶಾಸಕ ಸತ್ಯಜಿತ್‌ ಬಿಸ್ವಾಸ್‌ರನ್ನ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಘಟನೆ ನಡೆದಿದ್ದು, ಜನರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇದರಿಂದ ಆರೋಪಿಗಳು ಎಸ್ಕೇಪ್‌ ಆಗಿದ್ದು, ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ. ಇನ್ನು ಇದೊಂದು ರಾಜಕೀಯ ಪ್ರೇರಿತ ಕೊಲೆ ಅಂತಾ ಟಿಎಂಸಿ ಆರೋಪಿಸಿದೆ.

Leave a Reply

Your email address will not be published. Required fields are marked *