ಠೇವಣಿ ಕಳೆದುಕೊಂಡ ಪ್ರಕಾಶ್ ರೈಗೆ ಬಿದ್ದ ಮತಗಳೆಷ್ಟು ಗೊತ್ತಾ..?

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದದ ಅಭಿಯಾನದಲ್ಲಿ ಮಂಚೂಣಿಯಲ್ಲಿದ್ದ ಪ್ರಕಾಶ್ ರೈ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ.

ಸೋಲು ಖಚಿತವಾಗುತ್ತಿದ್ದಂತೆಯೇ, ಮತಎಣಿಕೆ ಕೇಂದ್ರದಿಂದ ಹೊರನಡೆದ ಪ್ರಕಾಶ್ ರೈ, ಈ ಸೋಲು ನನಗಾದ ಕಪಾಳಮೋಕ್ಷ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು ಹತ್ತೊಂಬತ್ತು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಪ್ರಕಾಶ್ ರೈ ಕೂಡಾ ಒಬ್ಬರು. ಒಂದು ಮಟ್ಟಿನ ಸ್ಪರ್ಧೆಯನ್ನು ಪ್ರಕಾಶ್ ರೈ ಒಡ್ದಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಠೇವಣಿ ಉಳಿಸಿಕೊಳ್ಳುವುದರಲ್ಲೂ ಪ್ರಕಾಶ್ ರೈ ವಿಫಲರಾಗಿದ್ದಾರೆ.

ಠೇವಣಿ ಕಳೆದುಕೊಂಡ ಪ್ರಕಾಶ್ ರೈ

ಪಿ.ಸಿ.ಮೋಹನ್ 6,02,853, ರಿಜ್ವಾನ್ ಅರ್ಷದ್ 5,31,885 ಮತ್ತು ನೋಟಾಗೆ 10,760 ಮತಗಳು ಬಿದ್ದಿವೆ. ಉಳಿದಂತೆ ಕೆಲವರು ನಾಲ್ಕು ಅಂಕಿ ದಾಟಿದ್ದರೆ, ಇನ್ನುಳಿದವರು ಮೂರಂಕೆಗೆ ತೃಪ್ತಿ ಪಡಬೇಕಾಗಿದೆ. ಪ್ರಕಾಶ್ ರೈ 28,906 ಮತಗಳನ್ನು ಪಡೆದು ಠೇವಣಿಯನ್ನು ಕಳೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *