ಭಾರತ ಕ್ರಿಕೆಟ್ ತಂಡಕ್ಕೆ ಇಂದು ಐತಿಹಾಸಿಕ ದಿನ..!

ಹೌದು, ಟೀಮ್ ಇಂಡಿಯಾ ಪಾಲಿಗೆ ಇಂದು ಎಂದೂ ಮರೆಯಲಾಗದ ಐತಿಹಾಸಿಕ ದಿನ. ವಿಶ್ವಕಪ್ ಕ್ರಿಕೆಟ್ ನಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಎತ್ತಿಹಿಡಿದ ದಿನ. ಜೂನ್ 25, 1983 ರಂದು ಕಪಿಲ್ ದೇವ್ ನೇತೃತ್ವದ ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿ ಗೆದ್ದು ಬೀಗಿದ ದಿನ.

ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಕಪಿಲ್ ದೇವ್ ನೇತೃತ್ವದ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ 43 ರನ್ ಗಳ ಭರ್ಜರಿ ಗೆಲುವನ್ನು ದಾಖಲಿಸಿತ್ತು. ಮೊದಲು ಬ್ಯಾಟ್ ಮಾಡಿ ಕಪಿಲ್ ಪಡೆ 54 ಓವರ್ ಗಳಲ್ಲಿ 183 ರನ್ ಗಳಿಗೆ ಆಲೌಟ್ ಆಗಿತ್ತು. ಆದ್ರೆ ಸೂಪರ್ ಸ್ಪೆಲ್ ಮಾಡಿದ ಬೌಲರ್ ಗಳು ವಿಂಡೀಸ್ ತಂಡವನ್ನು 140 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿತ್ತು. ಚೊಚ್ಚಲ ವಿಶ್ವಕಪ್ ಗೆದ್ದು ಇಂದಿಗೆ 36 ವರ್ಷವಾಗಿದೆ.

Leave a Reply

Your email address will not be published. Required fields are marked *