ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಜಾಗೃತಿ ಆಂದೋಲನಕ್ಕೆ ಚಾಲನೆ

ಗಂಗಾವತಿ :  ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಕೊಪ್ಪಳ ವತಿಯಿಂದ ಹಮ್ಮಿಕೊಂಡ ಸತ್ಯಮೇವ ಜಯತೆ ಹಾಗೂ ಜಲಾಮೃತ ಜಾಗೃತಿ ಜನಾಂದೋಲನ ಕಾರ್ಯಕ್ರಮಕ್ಕೆ, ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ಬಸವರಾಜ್ ದಡೇಸೂಗುರು ವಿದ್ಯುಕ್ತವಾಗಿ ಚಾಲನೆ ಸೋಮವಾರ ನೀಡಿದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಸ್ವಚ್ಛ ಮೇವ ಜಯತೆ ರಥಯಾತ್ರೆಗೆ ಇಂದು ಚಾಲನೆ ನೀಡಲಾಗಿದ್ದು, ಸಾರ್ವಜನಿಕರು ಸ್ವಚ್ಛತೆ ಬಗ್ಗೆ ಜಾಗೃತಿ ವಹಿಸಬೇಕು. ಬಯಲಿನಲ್ಲಿ ಶೌಚ ಮಾಡುವುದು, ತ್ಯಾಜ ವಸ್ತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡುವುದು ಮಾಡಬಾರದು. ಪ್ರತಿಯೊಬ್ಬರು ಶೌಚಾಲಯಗಳನ್ನು ಕಟ್ಟಿಸಿಕೊಳ್ಳಬೇಕು. ಆರೋಗ್ಯ ದೃಷ್ಠಿಯಿಂದ ನಿಮ್ಮ ಮನೆ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಅಲ್ಲದೇ ಇವತ್ತಿನ ದಿನದಲ್ಲಿ ಪರಿಸರವನ್ನು ಉಳಿಸುವ ಕೆಲಸ ಆಗಬೇಕಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮುಂದೆ ಗಿಡಗಳನ್ನು ನೆಡಬೇಕು ಎಂದು ಹೇಳಿದರು.  

Leave a Reply

Your email address will not be published. Required fields are marked *