ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ

ದುಬೈ : ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇಂದು ಬಿಡುಗಡೆಗೊಂಡ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರು ಸ್ಥಾನ ಬಡ್ತಿ ಪಡೆದ ಸ್ಮೃತಿ ಮಂಧಾನ ಅಗ್ರಸ್ಥಾನವನ್ನ ಅಲಂಕರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಂಧಾನ, 751 ರೇಟಿಂಗ್ ಪಾಯಿಂಟ್ ಗಳೊಂದಿಗೆ ಆಸ್ಟ್ರೇಲಿಯಾದ ಎಲ್ಲೀಸ್ ಪೆರ್ರಿ ಹಾಗೂ ಮೆಗ್ ಲ್ಯಾನಿಂಗ್ ಅವರನ್ನ ಹಿಂದಿಕ್ಕಿ ಆಗ್ರಸ್ಥಾನವನ್ನ ಅಲಂಕರಿಸಿದ್ದಾರೆ. 669 ರೇಟಿಂಗ್ ಪಾಯಿಂಟ್ ಗಳನ್ನ ಹೊಂದಿರೋ ಮಿಥಾಲಿ ರಾಜ್ 4ನೇ ಸ್ಥಾನದಲ್ಲಿದ್ದಾರೆ.  

Leave a Reply

Your email address will not be published. Required fields are marked *