ಸತತ 3ನೇ ಬಾರಿ ಫ್ರೆಂಚ್ ಓಪನ್ ಗೆದ್ದ ಕ್ಲೇ ಕೋರ್ಟ್ ಕಿಂಗ್

ಪ್ಯಾರಿಸ್ :  ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ಮೂರನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿಹಿಡಿಯುವ ಮೂಲಕ ಮತ್ತೊಮ್ಮೆ ಕ್ಲೇ ಕೋರ್ಟ್ ಕಿಂಗ್ ರಾಫೆಲ್ ನಡಾಲ್ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಫೈನಲ್ ನಲ್ಲಿಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ವಿರುದ್ಧ 4 ಸೆಟ್‌ಗಳ ಹೋರಾಟ ನಡೆಸಿ 6-3, 5-7, 6-1, 6-1 ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ನಡಾಲ್ ಇದುವರೆಗೂ ಒಟ್ಟು 12 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದ ದಾಖಲೆ ಮಾಡಿದರು. ಅಲ್ಲದೇ ನಡಾಲ್ ಫ್ರೆಂಚ್ ಓಪನ್ ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸುತ್ತಿರುವುದು ಮೂರನೇ ಸಲ. 

Leave a Reply

Your email address will not be published. Required fields are marked *