ಸಾರ್ವಜನಿಕರ ಆರೋಗ್ಯ ಕಾಪಾಡುವುದೇ ಔಷಧ ವ್ಯಾಪಾರಿಗಳ ಕರ್ತವ್ಯ

ಗಂಗಾವತಿ: ಸಾರ್ವಜನಿಕರ ಆರೋಗ್ಯ ಕಾಪಾಡುವುದೇ ಔಷಧ ವ್ಯಾಪಾರಿಗಳ ಕರ್ತವ್ಯ ಎಂದು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ರಾಜ್ಯ ಉಪಾದ್ಯಕ್ಷ ಅಶೋಕಸ್ವಾಮಿ ಹೇರೂರ ಹೇಳಿದರು. ಶುಕ್ರವಾರ ಮಧ್ಯಾಹ್ನ ನಗರದ ಔಷಧೀಯ ಭವನದಲ್ಲಿ ನಡೆದ ಔಷಧ ವ್ಯಾಪಾರಿಗಳ ಸಂಘದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆರೋಗ್ಯದ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೇಳಿಕೊಂಡು ಬರುವ ರೋಗಿಗಳಿಗೆ ನೇರವಾಗಿ ಅಲೋಪತಿ ಔಷಧಗಳನ್ನು ನೀಡದೆ ಮನೆ ಔಷಧಗಳನ್ನು‌ ಬಳಸಲು ಸೂಚಿಸಬೇಕೆಂದು ಕರೆ ನೀಡಿದರು. ಆಯುರ್ವೇದ ಔಷಧಗಳನ್ನು ಜನ ಬಳಸುವುದರಿಂದ ಆಗುವ ಅನುಕೂಲಗಳ ಬಗ್ಗೆ ತಿಳುವಳಿಕೆ ನೀಡಿ, ನಮ್ಮ ದೇಶದಲ್ಲಿ 5000 ವರ್ಷಗಳಿಂದ ಬಳಕೆಯಲ್ಲಿರುವ ಆಯುರ್ವೇದ ವೈದ್ಯಕೀಯ ಪದ್ದತಿಯನ್ನು ರಕ್ಷಿಸುವ ಮೂಲಕ ದೇಶದ ಮತ್ತು ಜನರ ವಾಣಿಜ್ಯ ವಹಿವಾಟು ಹದಗೆಡದಂತೆ ಕಾಯುವ ಕೆಲಸ ಮಾಡಬೇಕೆಂದರು.

ಔಷಧ ನಿಯಮಗಳನ್ನು ಪಾಲಿಸುವ ಮೂಲಕ ವೃತ್ತಿ ಧರ್ಮದ ಜೊತೆಗೆ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಗಳನ್ನು ಹಮ್ಮಿಕೊಳ್ಳಲು ಸೂಚಿಸಿದರು.

ಈ ವೇಳೆ ದಂತ ವೈದ್ಯಕೀಯ ಪದವೀಧರೆ ಡಾ.ಅಭಿಲಾಷಾ, ಡಿ.ಫ಼ಾರ್ಮಸಿ ಕೊರ್ಸ ಮುಗಿಸಿದ ತ್ರೀವೇಣಿ, ಬಸವರಾಜೇಶ್ವರಿ ಮತ್ತು ಮಂಜುಳಾ ಇವರುಗಳನ್ನು ಸನ್ಮಾನಿಸಲಾಯಿತು. ಗಂಗಾವತಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಮಾಜಿ ಅಧ್ಯಕ್ಷ ಕನಕರಾಜ ದರೋಜಿ, ಪಿ.ರುದ್ರಪ್ಪ, ಬಿ.ಫ಼ಾರ್ಮಸಿ ಪದವೀಧರರಾದ ಆಭೀದ ಹುಸೇನ್, ಎಸ್.ಗಣೇಶ್, ರೋಹಿತ ಐಲಿ ಉಪಸ್ತಿತರಿದ್ದರು.

Leave a Reply

Your email address will not be published. Required fields are marked *