ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

ಗಂಗಾವತಿ : ತಾಲ್ಲೂಕಿನ ವಡ್ಡರಹಟ್ಟಿ ಕ್ಯಾಂಪ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವಡ್ಡರಹಟ್ಟಿ ಕ್ಯಾಂಪ್ ನ ಟೈಲರ್ ಮರ್ದಾನ್ ಅಲಿ ಉಚಿತವಾಗಿ ನೋಟ್ ಬುಕ್ ಮತ್ತು ಪೆನ್ ಗಳನ್ನು ಬುಧವಾರ ವಿತರಣೆ ಮಾಡಿದರು. ಜಿಲ್ಲೆಯಾದ್ಯಂತ ಟೈಲರಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಮರ್ದಾನ್ ಅಲಿ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ ಗಳನ್ನು ಉಚಿತವಾಗಿ ನೀಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಲಿಯಬೇಕು. ಸರ್ಕಾರ ಬಡ ಮಕ್ಕಳಿಗೆ ಸಾಕಷ್ಟು ಯೋಜನೆಗಳನ್ನು ತಂದಿದೆ. ಅದನ್ನೆಲ್ಲ ಸದುಪಯೋಗಪಡಿಸಿಕೊಳ್ಳಬೇಕು. ನಾನು ಕೂಡ ಸರ್ಕಾರ ಶಾಲೆಯಲ್ಲೇ ಓದಿದ್ದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.

ಅಲ್ಲದೆ ಗುಡ್ಡದ ಕ್ಯಾಂಪಿನ ಸರ್ಕಾರಿ ಶಾಲೆಗೂ ತೆರಳಿ ಅಲ್ಲಿನ ಮಕ್ಕಳಿಗೂ ನೋಟ್ ಬುಕ್ ಮತ್ತು ಪೆನ್ಸಿಲ್ ರಬ್ಬರ್ ಗಳನ್ನು ವಿತರಣೆ ಮಾಡಿದರು. ಈ ವೇಳೆ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್ ಕಸಬೆ, ಶಿಕ್ಷಕಿ ಜಯಮ್ಮ, ಎಸ್ ಡಿಎಂಸಿ ಉಪಾಧ್ಯಕ್ಷ ಹನುಮಂತಪ್ಪ, ಸದಸ್ಯರಾದ ಹನುಮಂತಪ್ಪ ಕ್ಯಾದಿಗುಪ್ಪ, ಶರಣಪ್ಪ ಮೇಟಿ, ಯಮನಮ್ಮ, ಲಕ್ಮವ್ವ ಹಾಗೂ ಮರ್ದಾನ್ ಅಲಿ ಸ್ನೇಹಿತರಾದ ಲಕ್ಷ್ಮಣ್, ಹನುಮೇಶ್ ಬಳ್ಳಾರಿ, ಜಹೀರ್ ಅಬ್ಬಾಸ್ ಇದ್ದರು.

Leave a Reply

Your email address will not be published. Required fields are marked *