ಸಂಭ್ರಮದ ವಾಸವಿ ಜಯಂತ್ಯೋತ್ಸವ

ಗಂಗಾವತಿ: ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ಆರ್ಯವೈಶ್ಯ ವಾಸವಿ ಯುವಜನ ಸಂಘ ಹಾಗೂ ವಾಸವಿ ಮಹಿಳಾ ಮಂಡಳಿವತಿಯಿಂದ 33ನೇ ವಾಸವಿ ಜಯಂತ್ಯೋತ್ಸವ ಮಂಗಳವಾರ ಆಚರಿಸಲಾಯಿತು. ಜಯಂತಿಯ ಅಂಗವಾಗಿ ಶ್ರೀ ಕನ್ನಿಕಾಪರಮೇಶ್ವರಿ ನಿವೇಶನದಲ್ಲಿ ಅಮ್ಮನವರ ಪೂಜೆ ಮತ್ತು ಬಾವುಟ ಏರಿಸಲಾಯಿತು. ನಂತರ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಶ್ರೀ ನಂಜುಡೇಶ್ವರ ದೇವಸ್ಥಾನದವರೆಗೆ ಸುಮಂಗಲಿಯರೊಂದಿಗೆ ಕುಂಭದ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

Leave a Reply

Your email address will not be published. Required fields are marked *