ಸಚಿವ ಸಂಪುಟ ವಿಸ್ತರಣೆ : ಬಿ.ಸಿ.ಪಾಟೀಲ್ ಅಭಿಮಾನಿಗಳಿಂದ ಆಕ್ರೋಶ

ಹಾವೇರಿ : ನಾಳೆ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಹಾವೇರಿ ಜಿಲ್ಲೆಯ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅಭಿಮಾನಿಗಳು  ತಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ‍್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು, ಸಿದ್ದರಾಮಯ್ಯನವರೇ ಪಾಟೀಲ್ ರಿಗೆ ಈ ಹಿಂದೆ ಸೋತಾಗ ಗೆದ್ದಿದ್ದರೆ ಸಚಿವ ಸ್ಥಾನ ಕೊಡಿಸುತ್ತಿದ್ದೆ ಅಂದೋರು ಗೆದ್ದಾಗ ಎಲ್ಲಿ ಹೋಗೀರಾ..? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರೇ 2013 ರಲ್ಲಿ ನೀವೇ ಮುಖ್ಯಮಂತ್ರಿ ಆಗಬೇಕು ಅಂತಾ ಬಹಿರಂಗವಾಗಿ ಮೊದಲು ಹೇಳಿದ್ದು ಬಿ.ಸಿ. ಪಾಟೀಲರೇ ‌ನೆನಪಿರಲಿ ಎಂದು ಅಭಿಮಾನಿಗಳಿಂದ ಚಾಟಿ ಬೀಸಿದ್ದಾರೆ. ಹೀಗಾಗಿ ನಾಳೆ ನಡೆಯೋ ಸಂಪುಟ ವಿಸ್ತರಣೆಯಲ್ಲಿ ಪಾಟೀಲ್ ಗೆ ಸಚಿವ ಸ್ಥಾನ ಸಿಗುತ್ತಾ ಅಥವಾ ಕೈ ತಪ್ಪುತ್ತಾ ಎಂಬ ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ. ಅಲ್ಲದೇ ಒಂದು ವೇಳೆ ಸಚಿವ ಸ್ಥಾನ ಸಿಗದೇ ಇದ್ರೆ, ಬಿಸಿ ಪಾಟೀಲರು ಮುಂದೆ ಏನು ಮಾಡಬಹುದು ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

Leave a Reply

Your email address will not be published. Required fields are marked *