ಪುಲ್ವಾಮ ದಾಳಿಗೂ ಪಾಕಿಸ್ತಾನಕ್ಕೂ ಸಂಬಂಧ ಇಲ್ಲ : ಪಾಕ್ ಸೇನೆ

ಪುಲ್ವಾಮ್‌ದಲ್ಲಿ ಫೆ.14 ರಂದು ನಡೆದ ಉಗ್ರರ ಆತ್ಮಾಹುತಿ ಬಾಂಬ್ ದಾಳಿಯ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪಾಕಿಸ್ತಾನ ಸೇನೆ ಸ್ಪಷ್ಟಪಡಿಸಿದೆ. ಪಾಕ್ ಸೇನೆಯ ಮೇಜರ್ ಜನರಲ್ ಆಸೀಫ್ ಗಫೂರ್ ಪುಲ್ವಾಮ್ ದಾಳಿ ಬಗ್ಗೆ ಮಾತಾನಾಡಿದ್ದು, ಫುಲ್ವಾಮ್ ದಾಳಿಗೂ ಪಾಕಿಸ್ತಾನಕ್ಕೂ ಸಂಬಂಧ ಇಲ್ಲ. ಪಾಕಿಸ್ತಾನ ಯಾವಾಗಲೂ ಶಾಂತಿಯನ್ನು ನಿರೀಕ್ಷೆ ಮಾಡುತ್ತೆ ಎಂದಿದ್ದಾರೆ.

ಭಾರತದಲ್ಲಿ ಚುನಾವಣಾ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತವೆ, ಲೋಕಸಭೆ ಚುನಾವಣೆ ಹಿನ್ನಲೆ ಈ ದಾಳಿ ನಡೆದಿರಬಹುದು ಎಂದಿದ್ದಾರೆ. ಅಲ್ದೇ, ಸರಿಯಾದ ಸಾಕ್ಷ್ಯಗಳಿಲ್ಲದೆ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ. ಪಾಕಿಸ್ತಾನ ಭಯೋತ್ಪಾದನೆ ಬೆಳೆಸುವ ಕೆಲಸ ಮಾಡ್ತಿಲ್ಲ ಎಂದರು.

ಅಲ್ದೇ, ಗಡಿ ನಿಯಂತ್ರಣ ರೇಖೆಯಲ್ಲಿ ವಿವಿಧ ಹಂತಗಳಲ್ಲಿ ಭಾರತದ ಭದ್ರತಾ ವ್ಯವಸ್ಥೆ ಇದೆ, ಸ್ಥಳೀಯ ನಿವಾಸಿಗಳಿಗಿಂತ ಹೆಚ್ಚು ಭದ್ರತಾ ಪಡೆಗಳಿವೆ. ಇಂತಹದ್ರಲ್ಲಿ ಭದ್ರತಾ ಪಡೆಗಳ ಕಣ್ಣು ತಪ್ಪಿಸಿ LOC ದಾಟಿ ಬರಲು ಸಾಧ್ಯವೇ..? ಪಾಕಿಸ್ತಾನದ ಅಭಿವೃದ್ಧಿ ಮಾತುಕತೆ ವೇಳೆ ಭಾರತದಲ್ಲಿ ಇಂತಹ ದುರಂತಗಳು ನಡೆಯುತ್ತವೆ. ಪಾಕಿಸ್ತಾನದಲ್ಲಿ ಒಟ್ಟು ಎಂಟು ಮಹತ್ವದ ಮಾತುಕತೆಗಳು ನಡೆಯಬೇಕಿತ್ತು.

ಸೌದಿಯ ರಾಜ ಫೆ.14 ಪಾಕಿಸ್ತಾನಕ್ಕೆ ಭೇಟಿ ನೀಡಿ ಹೂಡಿಕೆ ಸಂಬಂಧ ಮಾತುಕತೆ ನಡೆಸಬೇಕಿತ್ತು ಎಂದಿದ್ದಾರೆ. ಈವೇಳೆ ನಾವು ಭಾರತದ ಮೇಲೆ ದಾಳಿ ಮಾಡಿಸುವುದರಿಂದ ಪಾಕಿಸ್ತಾನಕ್ಕೆ ಏನು ಲಾಭ..? ಭಾರತ ನಮ್ಮ ಮೇಲೆ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಪಾಕಿಸ್ತಾನ ಸೇನೆ ಹೇಳಿದೆ.

Leave a Reply

Your email address will not be published. Required fields are marked *