ಮಗಳನ್ನು ಕಿಡ್ನ್ಯಾಪ್ ಮಾಡುವುದಾಗಿ ಧೋನಿಗೆ ಬೆದರಿಕೆ..!

ಚೆನ್ನೈ: ತನ್ನ ತುಂಟಾಟಗಳಿಂದಲೇ ಚಿಕ್ಕ ವಯಸ್ಸಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಫ್ಯಾನ್ ಫಾಲೋವರ್ಸ್ ಗಳನ್ನು ಹೋಂದಿರೋ ಟೀಮ್ ಇಂಡಿಯಾದ ರಾಂಚಿ ರ್ಯಾಂಬೋ ಎಂ.ಎಸ್ ಧೋನಿ ಪುತ್ರಿ ಜೀವಾ ಧೋನಿ ಯಾರಿಗೆ ಗೊತ್ತಿಲ್ಲ. ಆದ್ರೀಗ ಧೋನಿ ಮಗಳನ್ನು ಕಿಡ್ನ್ಯಾಪ್ ಮಾಡುವುದಾಗಿ ಬೆದರಿಕೆ ಸಂದೇಶವೊಂದು ಬಂದಿದೆ.

ಅರೇ ಇದೇನಪ್ಪಾ ಧೋನಿ ಮಗಳ ಕಿಡ್ನ್ಯಾಪ್ ಹಾ ಅಂತಾ ಆಶ್ಚರ್ಯ ಪಡಬೇಡಿ. ಅಷ್ಟಕ್ಕೂ ಜೀವಾ ಧೋನಿಯನ್ನು ಅಪರಣ ಮಾಡೋದಾಗಿ ಯಾರು ಹೇಳಿದ್ದಾರೆ ಗೊತ್ತಾ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮಾಲಕಿ ಪ್ರೀತಿ ಜಿಂಟಾ. ಹೌದು ಅಷ್ಟಕ್ಕೂ ಪ್ರೀತಿ ಧೋನಿ ಮಗಳನ್ನು ಯಾಕೆ ಕಿಡ್ನ್ಯಾಪ್ ಮಾಡುವುದಾಗಿ ಹೇಳಿದ್ದಾರೆ ಎಂಬುದಕ್ಕೆ ಸ್ವತಃ ಅವರೇ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ ನೋಡಿ..

ಮುದ್ದು ಜೀವಾ ಗೆ ಮನಸೋತಿರುವ ಪ್ರೀತಿ ಜಿಂಟಾ ಧೋನಿ ಬಳಿ ಈ ರೀತಿ ತಮಾಷೆ ಮಾಡಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದ ಬಳಿಕ ಪ್ರೀತಿ, ಧೋನಿ ಪುತ್ರಿಯ ಬಗ್ಗೆ ಈ ರೀತಿ ಹೇಳಿದ್ದಾರೆ. ‘ಕ್ಯಾಪ್ಟನ್ ಕೂಲ್ ಗೆ ಅನೇಕ ಅಭಿಮಾನಿಗಳಿದ್ದಾರೆ. ಆದರೆ ನನ್ನ ಅಭಿಮಾನ ಧೋನಿಯಿಂದ ಅವರ ಪುತ್ರಿ ಜೀವಾ ಕಡೆಗೆ ವಾಲುತ್ತಿದೆ. ನಾನು ಈ ಮೂಲಕ ಧೋನಿಗೆ ಹೇಳುತ್ತಿದ್ದೇನೆ, ಬಿ ಕೇರ್ ಫುಲ್, ನಾನು ಬಹುಶಃ ಜೀವಾಳನ್ನು ಕಿಡ್ನ್ಯಾಪ್ ಮಾಡಬಹುದು’ ಎಂದು ಪ್ರೀತಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *