ಪಾಕ್ ವಿರುದ್ಧ ಅಫ್ಘಾನ್ ವಿಶ್ವಸಂಸ್ಥೆಗೆ ದೂರು

ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ ವಿಶ್ವಸ್ಂಸ್ಥೆಗೆ ದೂರು ನೀಡಿದೆ. ಪಾಕ್ ಕೇವಲ ಭಾರತದ ಜತೆ ಅಷ್ಟೇ ಅಲ್ಲ ನಮ್ಮ ಜೊತೆಯೂ ಕೂಡಾ ದ್ವೇಷ ಕಟ್ಟಿಕೊಳ್ಳುತ್ತಿದೆ. ಪದೇ-ಪದೇ ಗಡಿ ಕಾನೂನನ್ನ ಉಲ್ಲಂಘಿಸುತ್ತಿದೆ ಎಂದು ವಿಶ್ವಸಂಸ್ಥೆಗೆ ದೂರು ನೀಡಿದೆ.

ಪಾಕ್ ಸೇನೆಯು ನಮ್ಮ ಭೂಪ್ರದೇಶದಲ್ಲಿ ಅಕ್ರಮಿಸಿಕೊಂಡಿದೆ ಎಂದು ಅಫ್ಘಾನ್ ಪ್ರಧಾನಿ ಅಶ್ರಫ್ ಘನಿ ಆರೋಪಿಸಿದ್ದಾರೆ. ಈ ಕುರಿತು ಅಫ್ಘಾನ್ ನಿಯೋಗದ ಉಪಮುಖ್ಯಸ್ಥ ನಝೀಫುಲ್ಲಾ ಸಲರ್‌ಝಾಯ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಫೆ.22ರಂದು ಪತ್ರ ಬರೆದಿದ್ದಾರೆ. ಪಾಕ್ ಸೇನೆಯು ಅಫ್ಘಾನ್ ಭೂಭಾಗಗಳ ಮೇಲೆ ನಿರಂತರ ಶೆಲ್ ದಾಳಿ ನಡೆಸುತ್ತಿವೆ.

ಅಲ್ದೆ, ಪಾಕ್ ಸೇನಾ ವಿಮಾನಗಳು ವಾಯುಪ್ರದೇಶವನ್ನು ಉಲ್ಲಂಘಿಸುತ್ತಿವೆ, ನಮ್ಮ ಪ್ರದೇಶವನ್ನ ಅಕ್ರಮಿಸಿಕೊಂಡು ಸೇನಾ ಠಾಣೆಗಳು ಮತ್ತು ಬೇಲಿಗಳನ್ನು ನಿರ್ಮಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಿದೆ. ಇದುವರೆಗೂ ಪಾಕ್ ಸೇನೆ ಗಡಿ ಕಾನೂನನ್ನ 161 ಬಾರಿ ಉಲ್ಲಂಘನೆ ಮಾಡಿದ್ದು, 6000 ಮಾರ್ಟರ್ ಹಾಗೂ ಆರ್ಟಲರಿ ಶೆಲ್ ಗಳು ಅಫ್ಘಾನ್ ಗಡಿಯಲ್ಲಿ ಕಂಡು ಬಂದಿದೆ ಎನ್ನಲಾಗ್ತಿದೆ.

Leave a Reply

Your email address will not be published. Required fields are marked *