ಒಳಚರಂಡಿ ದುರಸ್ತಿಗೆ ಮುಂದಾಗದ ನಗರಸಭೆ

ದೊಡ್ಡಬಳ್ಳಾಪುರ : ಕಳೆದ ಒಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ದೊಡ್ಡಬಳ್ಳಾಪುರ ತಾಲ್ಲೂಕಿನ 29ನೇ ವಾರ್ಡ್ ಕಛೇರಿ ಪಾಳ್ಯದಲ್ಲಿ ಒಳಚರಂಡಿ ತುಂಬಿ ಹರಿಯುತ್ತಿದೆ. ಒಳ ಚರಂಡಿ ತುಂಬಿ ಹರಿಯುತ್ತಿರುವುದನ್ನು ನಗರಸಭೆಯ ಅಧಿಕಾರಿಗಳು ಖುದ್ದು ವೀಕ್ಷಣೆ ಮಾಡಿ ಫೋಟೋ ತೆಗೆದುಕೊಂಡು ಹೋಗಿರುವುದಷ್ಟೆ ಆದರೇ ಇದುವರೆಗೂ ಚರಂಡಿ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಚರಂಡಿಯ ನೀರೆಲ್ಲಾ ರಸ್ತೆಯ ಮಧ್ಯೆ ಹರಿಯುತ್ತಿದ್ದು, ಗಬ್ಬು ವಾಸನೆ ನಿವಾಸಿಗಳ ನಿದ್ದೆಗೆಡಿಸಿದೆ. ಅಲ್ಲದೆ ಪ್ರತಿನಿತ್ಯ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕಾಲೋನಿಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದೂ, ಚರಂಡಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಏನಾದರೂ ಅನಾಹುತ ಸಂಭವಿಸುವ ಮೊದಲೇ ನಗರಸಭೆ ಅಧಿಕಾರಿಗಳು ಚರಂಡಿ ದುರಸ್ತಿಗೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *