ಮುಂಬೈಗೆ 4ನೇ ಬಾರಿ ಐಪಿಎಲ್ ಕಿರೀಟ

ಹೈದ್ರಾಬಾದ್ : ಒಂದು ತಿಂಗಳುಗಳ ಕಾಲ ನಡೆದ ಐಪಿಎಲ್ ಕ್ರಿಕೆಟ್ ಸಮರಕ್ಕೆ ಭಾನುವಾರ ತೆರೆಬಿದ್ದಿದೆ. ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹೈದ್ರಾಬಾದ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರೋಹಿತ್ ಪಡೆ 8 ವಿಕೆಟ್ ಕಳೆದುಕೊಂಡು ಕೇವಲ 149 ರನ್ ಗಳಿಸಿತು. ಈ ಮೂಲಕ ಗೆಲುವಿಗೆ 150 ರನ್ ಗಳ ಸುಲಭ ಟಾರ್ಗೆಟ್ ನ್ನು ಪಡೆದ ಸಿಎಸ್ ಕೆ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುತ್ತೆ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳು ಇದ್ರು.

ಆದ್ರೇ, ಮುಂಬೈ ಬೌಲರ್ ಗಳು ಅಭಿಮಾನಿಗಳ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ರು. ಪಂದ್ಯ ಕೊನೆ ಓವರ್ ತನಕ ಹೋಗಿದ್ದು, ಭಾರೀ ರೋಚಕತೆ ಹುಟ್ಟಿಸುವಂತೆ ಮಾಡಿತು. ಕೊನೆ ಓವರ್ ನಲ್ಲಿ ಲಸಿತ್ ಮಾಲಿಂಗ್ ದಾಳಿಗೆ ಚೆನ್ನೈ 1 ರನ್ ನಿಂದ ಪಂದ್ಯವನ್ನು ಕೈಚೆಲ್ಲಿತ್ತು. ಈ ಮೂಲಕ ಮುಂಬೈ ಇಂಡಿಯನ್ಸ್ ಐಪಿಎಲ್ ನಲ್ಲಿ 4 ನೇ ಬಾರಿಗೆ ಚಾಂಪಿಯನ್ ಪಟ್ಟ ಆಲಂಕರಿಸೋ ಮೂಲಕ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಬಾರಿ ಚಾಂಪಿಯನ್ ಆದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *