ಮೊಬೈಲ್ ಲೋಕದಿಂದ ಹೊರಬರಲು ಹೀಗೆ ಮಾಡಿ

ಒಂದು ನಿಮಿಷ ಮೊಬೈಲ್‌ ಬಿಟ್ಟು ಇರಲು ಸಾಧ್ಯವಾಗದೆ ಸುಮ್ಮನೆ ಅದರ ಮೇಲೆ ಕಣ್ಣಾಡಿಸುತ್ತಾ ಇರುತ್ತೀರಾ? ಹಾಗಾದರೆ ನೀವು ಮೊಬೈಲ್‌ ಅಡಿಕ್ಷನ್‌ಗೆ ಒಳಗಾಗಿದ್ದೀರಿ ಎಂದರ್ಥ.

ಮೊಬೈಲ್‌ನಲ್ಲಿ ತುಂಬಾ ಸಮಯ ಕಳೆಯಬಾರದೆಂದು ಯೋಚಿಸುತ್ತೇವೆ, ಆದರೆ ನಮ್ಮ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ, ವಾಟ್ಸಾಪ್, ಫೇಸ್‌ಬುಕ್‌, ನ್ಯೂಸ್‌ ಹೀಗೆ ಯಾವುದೋ ಒಂದು ನೆಪ ಹೇಳಿ ಮೊಬೈಲ್‌ ನೋಡುತ್ತಾ ಇರುತ್ತೇವೆ.

ಈ ಚಟದಿಂದ ಬಿಡಿಸಿಕೊಳ್ಳಲು ಬಯಸುತ್ತೇವೆ ಆದರೆ ಸಾಧ್ಯವಾಗುವುದಿಲ್ಲ, ಮೊಬೈಲ್‌ ನೋಡುವುದನ್ನು ಕಮ್ಮಿ ಮಾಡಬೇಕೆಂದು ಬಯಸುವುದಾದರೆ ಮೊದಲಿಗೆ ನಾವು ಏಕೆ ಈ ರೀತಿ ಮೊಬೈಲ್‌ ನೋಡುತ್ತೇವೆ ಎಂದು ತಿಳಿಯಬೇಕು.

ನಮ್ಮ ಮೆದುಳಿಗೆ ಸುಮ್ಮನೆ ಇರಲು ಸಾಧ್ಯವಾಗುವುದಿಲ್ಲ, ಏನಾದರೂ ಮಾಡುತ್ತಲೇ ಇರಬೇಕು. ಮೊಬೈಲ್‌ ಬರುವುದಕ್ಕೆ ಮೊದಲು ಜನರು ಬುಕ್‌ ಓದುವುದು, ತೋಟಗಾರಿಕೆ, ಸಾಕು ಪ್ರಾಣಿಗಳ ಜತೆ ಸಮಯ ಕಳೆಯುವುದು ಹೀಗೆ ಏನೋ ಒಂದು ಮಾಡುತ್ತಾ ಇರುತ್ತಿದ್ದರು. ಆದರೆ ಮೊಬೈಲ್‌ ಬಂದಿದ್ದೇ ಜಗತ್ತೇ ಬದಲಾಗಿದೆ. ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿ ಕಳೆಯುವವರೇ ಹೆಚ್ಚಾಗಿದ್ದಾರೆ.

ಮೊಬೈಲ್ ಚಟದಿಂದ ಹೊರಬರುವುದು ಹೇಗೆ?

ಈ ಚಟದಿಂದ ಹೊರಬರಲು ನಿಮ್ಮ ಮೆದುಳಿಗೆ ಬೇರೆ ಕೆಲಸ ನೀಡಿ. ಆದರೆ ಅಷ್ಟು ಸುಲಭವಾಗಿ ಮೊಬೈಲ್‌ ಚಟ ಬಿಡಲು ಸಾಧ್ಯವಾಗುವುದಿಲ್ಲ, ಅದಕ್ಕಾಗಿ ನೀವು ಈ ರೀತಿ ಮಾಡಿ:

* ನಿಮ್ಮ ಫೋನ್‌ ಅನ್ನು ದೂರವಿಡಿ

ಫೋನ್‌ ಕಣ್ಣಿಗೆ ಬೀಳುವಂತೆ ಇರಬಾರದು, ದೂರವಿಡಬೇಕು. ಮೊಬೈಲ್‌ ನೋಡಬೇಕೆಂದು ಅನಿಸಿದಾಗ ಮನಸ್ಸನ್ನು ಬೇರೆ ಕಡೆಗೆ ಹರಿಸಿ.

* ಮೊಬೈಲ್‌ ನೋಡಲು ಇಂತಿಷ್ಟು ಸಮಯ ಅಂತ ಮೀಸಲಿಡಿ

ಮೊಬೈಲ್‌ ಬಳಕೆಗೆ ಟೈಮ್‌ ನಿಗದಿ ಮಾಡಿ. ಒಂದು ಗಂಟೆಯಲ್ಲಿ 5 ನಿಮಿಷ ನೋಡಿದರೆ ತಪ್ಪಿಲ್ಲ, ಆದರೆ ಇಡೀ ದಿನ ಅದರಲ್ಲೇ ಕಳೆಯುವುದರಿಂದ ಮಾನಸಿಕ ನೆಮ್ಮದಿಯೂ ಹಾಳಾಗುವುದು.

Leave a Reply

Your email address will not be published. Required fields are marked *