ನಿಮ್ಮ ಮಕ್ಕಳ ಎನರ್ಜಿ ಹೆಚ್ಚಿಸಬೇಕೆ..? ಹಾಗಾದ್ರೆ ಈ ಪಾನೀಯ ಕುಡಿಸಿ

ಪ್ರಸುತ್ತ ದಿನಗಳಲ್ಲಿ ಮಕ್ಕಳಿಗೆ ಕೆಮಿಕಲ್ ಯುಕ್ತ ಆಹಾರ ಹಾಗೂ ಪಾನೀಯಗಳನ್ನು ಕುಡಿಸಿ ಆರೋಗ್ಯ ಹಾಳು ಮಾಡುವ ಬದಲು ಅವರಿಗೆ ಮನೆಯಲ್ಲೇ ಆರೋಗ್ಯಕರ ಪಾನೀಯವನ್ನ ತಯಾರಿಸಿ ಕೊಡಿ. ಅದನ್ನ ಕುಡಿದ ಅವರ ಆರೋಗ್ಯವು ಉತ್ತಮವಾಗಿರುತ್ತೆ.

ಪಾನೀಯವನ್ನ ತಯಾರಿಸುವ ವಿಧಾನ

ಮೊದಲಿಗೆ ಒಣಶುಂಠಿ ಹಾಗೂ ಮೆಣಸಿನ ಕಾಳನ್ನು ತೆಗೆದುಕೊಂಡು ಬೇರೆ ಬೇರೆಯಾಗಿ ತುಪ್ಪ ಹಾಕಿ ಹುರಿದು ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ಗಟ್ಟಿ ಮೊಸರು 1 ಕಪ್ ತೆಗೆದುಕೊಂಡು ಅದಕ್ಕೆ ನೀರು ಹಾಕದೆ ಮಜ್ಜಿಗೆ ಮಾಡಿ, ಅದಕ್ಕೆ ಒಣಶುಂಠಿ ಪುಡಿ 1 ಚಿಟಿಕೆ ಹಾಗೂ ಮೆಣಸಿನಕಾಳಿನ ಪುಡಿ 1 ಚಿಟಿಕೆ ಹಾಕಿ ಅದಕ್ಕೆ ಸ್ವಲ್ಪ ಕಲ್ಲುಪ್ಪ ಹಾಗೂ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಊಟ ಆದ ಮೇಲೆ 2 ಬಾರಿ ಮಕ್ಕಳಿಗೆ ಕುಡಿಸಿ. ಇದರಿಂದ ಮಕ್ಕಳ ಆರೋಗ್ಯವು ಚೆನ್ನಾಗಿರುತ್ತೆ ಜೊತೆಗೆ ಎನರ್ಜಿ ಕೂಡ ಸಿಗುತ್ತೆ.

Leave a Reply

Your email address will not be published. Required fields are marked *