ಕುತೂಹಲ ಹೆಚ್ಚಿಸಿದೆ ಸಚಿವರ ಖಾತೆ ವಿಚಾರ..!

ನವದೆಹಲಿ : ಈಗಾಗಲೇ ಮೋದಿ ಸಂಪುಟಕ್ಕೆ 57 ಜನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೇ ನೂತನ ಸಚಿವರಿಗೆ ಯಾವ ಖಾತೆ ಸಿಗಲಿದೆ ಎನ್ನುವ ಕುತೂಹಲ ಇದೀಗ ಎಲ್ಲರಲ್ಲಿ ಮನೆ ಮಾಡಿದೆ.

24 ಸಂಪುಟ, 24 ರಾಜ್ಯ ಖಾತೆ ಹಾಗೂ 9 ಸ್ವತಂತ್ರ ನಿರ್ವಹಣೆಯ ಖಾತೆಗಳ ವಿವರ ಇಂದು ಸಂಜೆಯೊಳಗೆ ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಲಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಖಾತೆಗಳ ಪಟ್ಟಿ ಅಂತಿಮವಾಗಿದ್ದು, ರಾಷ್ಟ್ರಪತಿಗೆ ಕಳುಹಿಸುವುದೊಂದೇ ಬಾಕಿ ಇದೆ.

ಕರ್ನಾಟಕಕ್ಕೂ ಮೂರು ಸಂಪುಟ ದರ್ಜೆಯ ಸ್ಥಾನಮಾನ ದೊರೆತಿದ್ದು, ಯಾವ ಪ್ರಮುಖ ಖಾತೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಅಲ್ಲದೇ ವಿಶೇಷವಾಗಿ ಅಮಿತ್ ಶಾ ಗೆ ಹಣಕಾಸು ಅಥವಾ ಗೃಹ ಇಲಾಖೆ ದೊರೆಯುವುದು ನಿಚ್ಛಳವಾಗಿದೆ. ಶಾ ಗೃಹ ಇಲಾಖೆ ನೀಡಿದರೆ ರಾಜನಾಥ್ ಸಿಂಗ್ ಕೃಷಿ ಇಲಾಖೆಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.

ಸಚಿವರಿಗೆ ಸಿಗಬಹುದಾದ ಸಂಭಾವ್ಯ ಖಾತೆಗಳು

ರಾಜನಾಥ್ ಸಿಂಗ್       –           ಗೃಹ ಅಥವಾ ಕೃಷಿ

ಅಮಿತ್ ಶಾ     –           ಹಣಕಾಸು ಅಥವಾ ಗೃಹ ಖಾತೆ

ನಿತಿನ್ ಗಡ್ಕರಿ               –           ಹೆದ್ದಾರಿ ಹಾಗೂ ಜಲಸಾರಿಗೆ

ಡಿವಿ ಸದಾನಂದ ಗೌಡ            –     ಯೋಜನಾ ಮತ್ತು ಸಂಖ್ಯಿಕ ಅಥವಾ ಕಾನೂನು

ನಿರ್ಮಲಾ ಸೀತಾರಾಮನ್     –          ರಕ್ಷಣೆ

ರವಿಶಂಕರ್ ಪ್ರಸಾದ್             –        ಕಾನೂನು ಅಥವಾ ಟೆಲಿಕಾಂ

ನರೇಂದ್ರ ಸಿಂಗ್ ತೋಮರ್   –        ಸಂಸದೀಯ ವ್ಯವಹಾರ

ಎಸ್ ಜೈಶಂಕರ್         –           ವಿದೇಶಾಂಗ

ಪ್ರಹ್ಲಾದ್ ಜೋಶಿ        –           ಪೆಟ್ರೋಲಿಯಂ

ಪಿಯುಷ್ ಗೋಯೆಲ್         –           ರೈಲ್ವೆ

ಸ್ಮೃತಿ ಇರಾನಿ              –           ಮಹಿಳಾ ಮತ್ತು ಮಕ್ಕಳ ಕಲ್ಯಾಣ

Leave a Reply

Your email address will not be published. Required fields are marked *