ಕೊಪ್ಪಳ ಅಪರ ಜಿಲ್ಲಾಧಿಕಾರಿಯಾಗಿ ಸೈಯದಾ ಅಯಿಷಾ ಅಧಿಕಾರ

ಕೊಪ್ಪಳ : ಕೊಪ್ಪಳ ಅಪರ ಜಿಲ್ಲಾಧಿಕಾರಿಯಾಗಿ ಸೈಯದಾ ಅಯಿಷಾ ಅವರು ಅಧಿಕಾರ ವಹಿಸಿಕೊಂಡರು. ಪ್ರಭಾರ ಅಪರ ಜಿಲ್ಲಾಧಿಕಾರಿಯಾಗಿದ್ದ ಬಾಲಚಂದ್ರ ಅವರು ಕೊಪ್ಪಳ ನೂತನ ಅಪರ ಜಿಲ್ಲಾಧಿಕಾರಿಯಾಗಿರುವ ಸೈಯದಾ ಅಯಿಷಾರವರಿಗೆ ಅಧಿಕಾರ ಹಸ್ತಾಂತರಿಸಿದರು. ಸೈಯದಾ ಅಯಿಷಾ ಅವರು ಕೆಎಎಸ್ 2008ರ ಬ್ಯಾಚ್ ನವರಾಗಿದ್ದು, ಈ ಹಿಂದೆ ಬೆಂಗಳೂರು ಕೆ.ಯು.ಐ.ಡಿ.ಎಫ್.ಸಿ. ಯ ಜನರಲ್ ಮ್ಯಾನೆಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಕೊಪ್ಪಳ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.  

Leave a Reply

Your email address will not be published. Required fields are marked *