ಕರ್ನಾಟಕದ ಎಲ್ಲಾ ಲೋಕಸಭಾ ಕ್ಷೇತ್ರಗಳು ಕಮಲಮಯ

ಇಡೀ ದೇಶದ ಕುತೂಹಲ ಮೂಡಿಸಿದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಭರ್ಜರಿ ಜಯ ಗಳಿಸೋ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲೂ ಈ ಬಾರೀ ನಿರೀಕ್ಷೆಗೂ ಮೀರಿ ರಾಜ್ಯದಲ್ಲಿ ಕಮಲ ಅರಳಿದೆ.

28 ಕ್ಷೇತ್ರಗಳಲ್ಲಿ 25 ಸ್ಥಾನವನ್ನು ಗೆಲ್ಲುವ ಮೂಲಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಐತಿಹಾಸಿಕ ಸಾಧನೆ ಮಾಡಿದೆ. ಘಟಾನುಘಟಿ ನಾಯಕರುಗಳೇ ಈ ಬಾರೀ ಚುನಾವಣೆಯಲ್ಲಿ ಮಕಾಡೆ ಮಲಗಿದ್ದಾರೆ. ಅದರಲ್ಲೂ ಉತ್ತರಕರ್ನಾಟಕ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿಯು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು ವಿಶೇಷ.

ಹಾಗಾದ್ರೆ ರಾಜ್ಯದ ಯಾವ್ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಮ್ಯಾಜಿಕ್ ಮಾಡಿದೆ ಎಂಬ ಲಿಸ್ಟ್ ಇಲ್ಲಿದೆ ನೋಡಿ

1 ಚಿಕ್ಕೋಡಿ ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ)

2 ಬೆಳಗಾವಿ ಸುರೇಶ್ ಅಂಗಡಿ (ಬಿಜೆಪಿ)

3 ಬಾಗಲಕೋಟೆ ಪಿ.ಸಿ.ಗದ್ದೀಗೌಡರ್ (ಬಿಜೆಪಿ)

4 ವಿಜಯಪುರ ರಮೇಶ್ ಜಿಗಜಿಣಗಿ (ಬಿಜೆಪಿ)

5 ಕಲಬುರಗಿ ಉಮೇಶ್ ಜಾಧವ್ (ಬಿಜೆಪಿ)

6 ರಾಯಚೂರು ರಾಜಾ ಅಮರೇಶ್ ನಾಯಕ (ಬಿಜೆಪಿ)

7 ಬೀದರ್ ಭಗವಂತ ಖೂಬಾ (ಬಿಜೆಪಿ)

8 ಕೊಪ್ಪಳ ಕರಡಿ ಸಂಗಣ್ಣ (ಬಿಜೆಪಿ)

9 ಬಳ್ಳಾರಿ ದೇವೇಂದ್ರಪ್ಪ (ಬಿಜೆಪಿ)

10 ಹಾವೇರಿ ಶಿವಕುಮಾರ ಉದಾಸಿ (ಬಿಜೆಪಿ)

11 ಧಾರವಾಡ ಪ್ರಹ್ಲಾದ ಜೋಷಿ (ಬಿಜೆಪಿ)

12 ಉತ್ತರ ಕನ್ನಡ ಅನಂತಕುಮಾರ್ ಹೆಗಡೆ (ಬಿಜೆಪಿ)

13 ದಾವಣಗೆರೆ ಜಿ.ಎಂ.ಸಿದ್ದೇಶ್ವರ್ (ಬಿಜೆಪಿ)

14 ಶಿವಮೊಗ್ಗ ಬಿ.ವೈ.ರಾಘವೇಂದ್ರ (ಬಿಜೆಪಿ)

15 ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ (ಬಿಜೆಪಿ)

16 ಹಾಸನ ಪ್ರಜ್ವಲ್ ರೇವಣ್ಣ (ಜೆಡಿಎಸ್)

17 ದಕ್ಷಿಣ ಕನ್ನಡ ನಳಿನ್ ಕುಮಾರ್ ಕಟೀಲ್ (ಬಿಜೆಪಿ)

18 ಚಿತ್ರದುರ್ಗ ಎ.ನಾರಾಯಣಸ್ವಾಮಿ (ಬಿಜೆಪಿ)

19 ತುಮಕೂರು ಜಿ.ಎಸ್.ಬಸವರಾಜ್ (ಬಿಜೆಪಿ)

20 ಮಂಡ್ಯ ಸುಮಲತಾ (ಪಕ್ಷೇತರ)

21 ಮೈಸೂರು-ಕೊಡಗು ಪ್ರತಾಪ್ ಸಿಂಹ (ಬಿಜೆಪಿ)

22 ಚಾಮರಾಜ ನಗರ ಶ್ರೀನಿವಾಸ ಪ್ರಸಾದ್ (ಬಿಜೆಪಿ)

23 ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ್ (ಕಾಂಗ್ರೆಸ್)

24 ಬೆಂಗಳೂರು ಉತ್ತರ ಸದಾನಂದ ಗೌಡ (ಬಿಜೆಪಿ)

25 ಬೆಂಗಳೂರು ಸೆಂಟ್ರಲ್ ಪಿ.ಸಿ.ಮೋಹನ್ (ಬಿಜೆಪಿ)

26 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ (ಬಿಜೆಪಿ)

27 ಚಿಕ್ಕಬಳ್ಳಾಪುರ ಬಿ.ಎನ್.ಬಚ್ಚೇಗೌಡ (ಬಿಜೆಪಿ)

28 ಕೋಲಾರ ಮುನಿಸ್ವಾಮಿ (ಬಿಜೆಪಿ)

Leave a Reply

Your email address will not be published. Required fields are marked *