ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಹಿಂದೆ ಸರಿದ ಯುವರಾಜ..!

ಆತ ಮೈದಾನಕ್ಕೆ ಎಂಟ್ರಿಯಾದ್ರೆ ಸಾಕು ಎದುರಾಳಿ ಪಡೆಯಲ್ಲಿ ನಡುಕ ಶುರುವಾಗುತ್ತಿತ್ತು. ಬ್ಯಾಟ್ ಹಿಡಿದು ಕ್ರೀಸ್ ಗೆ ಬಂದ್ರೆ, ಬೌಲರ್ ಗಳ ಎದೆ ಢವ ಢವ ಎಂದು ಹೊಡೆದುಕೊಳ್ಳುತಿತ್ತು. ಆತನ ಬೌಲಿಂಗ್ ಮತ್ತು ಫಿಲ್ಡೀಂಗ್ ಗೆ ಘಟಾನುಘಟಿ ಆಟಗಾರರೇ ಫತರುಗುಟ್ಟಿ ಹೋಗುತಿದ್ದರು.

ಅದು ಟೆಸ್ಟ್ ಇರಲಿ, ಏಕದಿನ, ಟಿ-20 ಕ್ರಿಕೆಟ್ ಇರಲಿ, ಆತನೊಬ್ಬ ತಂಡದಲ್ಲಿದ್ರೆ ಸಾಕು ಉಳಿದ ಆಟಗಾರರ ಹುಮ್ಮಸ್ಸು ನೂರ್ಮಡಿಯಾಗುತಿತ್ತು. ಬರೋಬ್ಬರಿ ಆತನ 25 ವರ್ಷದ ಕ್ರಿಕೆಟ್ ಜೀವನದಲ್ಲಿ ಅದೆಷ್ಟೋ ಯಶಸ್ಸುಗಳನ್ನು ಕಂಡಿದ್ದ, ಅದರಷ್ಟೇ ನೋವು-ನಲಿವುಗಳು ಆತನನ್ನು ಬಿಟ್ಟುಬಿಡದೇ ಕಾಡಿತ್ತು. ತನ್ನ ಆತ್ಮಸ್ಥೈರ್ಯದಿಂದಲೇ ವಿಧಿಯನ್ನೇ ಗೆದ್ದು ಪುರ್ನಜನ್ಮ ಪಡೆದಿದ್ದ. ಕೊನೆಗೂ ತನ್ನಿಷ್ಟದ ಕ್ರಿಕೆಟ್ ದೇವರಿಗೆ ವಿಶ್ವಕಪ್ ಗೆದ್ದುಕೊಟ್ಟು ಈಡೀ ಜಗತ್ತೆ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ.

ಹೌದು, ಇಷ್ಟೇಲ್ಲಾ ಹೇಳ್ತಿರೋದು ಪಂಜಾಬ್ ಕಾ ಪುತ್ತರ್, ಸಿಕ್ಸರ್ ಕಿಂಗ್, ವಿಶ್ವಕಪ್ ಹೀರೋ. ಕ್ರಿಕೆಟ್ ಜಗತ್ತು ಕಂಡ ಸ್ಟಾರ್ ಪ್ಲೇಯರ್ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಕ್ರಿಕೆಟಿಗ ಯುವರಾಜ್ ಸಿಂಗ್ ಬಗ್ಗೆ. ಇದೀಗ ಯುವಿ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಇನ್ಮುಂದೆ ಟೀಮ್ ಇಂಡಿಯಾ ಪರ ಬ್ಲೂ ಜೆರ್ಸಿಯಲ್ಲಿ ಅವರನ್ನು ನೋಡುವುದಕ್ಕೆ ಆಗುವುದಿಲ್ಲ ಎಂಬುದನ್ನು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಆದರೆ ಯುವಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮಾತ್ರ ವಿದಾಯ ಹೇಳಿರೋದು. ಇನ್ಮುಂದೆ ಅವರನ್ನು ಚುಟುಕು ಕ್ರಿಕೆಟ್ ಲೀಗ್ ನಲ್ಲಿ ಕಣ್ತುಂಬಿಕೊಳ್ಳಬಹುದು. ಯುವರಾಜನ ಸೆಕೆಂಡ್ ಇನ್ನಿಂಗ್ಸ್ ಗೆ ಶುಭ ಹಾರೈಸೋಣ, ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಯುವಿ ಸಕ್ಸಸ್ ಕಾಣಲಿ ಅಂತಾ, ಮಿಸ್ ಯೂ ಯುವಿ..

Leave a Reply

Your email address will not be published. Required fields are marked *