ಹೆಣ್ಮಕ್ಕಳನ್ನು ಒಲಿಸಿಕೊಳ್ಳುವುದು ಹೇಗೆ ಗೊತ್ತಾ..? ಈ ಸುದ್ದಿ ಓದಿ ನಿಮಗೆ ಗೊತ್ತಾಗುತ್ತೆ..!

ಹೆಣ್ಮಕ್ಕಳ ಭಾವನೆ ತುಂಬಾ ಸೂಕ್ಷ್ಮ. ನೀವು ಅವಳ ಭಾವನೆಯನ್ನು ಅರ್ಥ ಮಾಡಿಕೊಳ್ಳದೆ ಹೋದರೆ ಅವಳಿಗೆ ನಿರಾಸೆಯಾಗುವುದು. ಪ್ರತಿಯೊಬ್ಬ ಹುಡುಗಿಗೆ ಅವಳದ್ದೇ ಆದ ಇಷ್ಟಗಳಿರುತ್ತದೆ. ಆದರೆ ತನ್ನ ಹುಡುಗ ಈ ರೀತಿ ಮಾಡುವುದನ್ನು ಎಲ್ಲಾ ಪ್ರೇಮಿ ಇಷ್ಟ ಪಡುತ್ತಾರೆ.

ಫಿಲಂ ನೋಡುವಾಗ ಅಥವಾ ನೀವಿಬ್ಬರು ಕೂತು ಏನೋ ಮಾತನಾಡುವಾಗ ಅವಳ ಕೂದಲಿನ ಮೇಲೆ ನೀವು ಕೈಯಾಡಿಸುತ್ತಾ ಇರುವುದು. ಅವಳ ಮುಂಗುರುಳು ಹಿಂದೆ ಸರಿಸುವುದು ಹೀಗೆಲ್ಲಾ ಮಾಡಿದರೆ ಅವಳಿಗೆ ತುಂಬಾ ಇಷ್ಟವಾಗುವುದು.

ಆಕೆಗೆ ಚಳಿ ಅನಿಸಿದಾಗ ನಿಮ್ಮ ಜಾಕೆಟ್‌ ಬಿಚ್ಚಿ ಆಕೆಯ ಮೈಮೇಲೆ ಹಾಕಿದರೆ ನಿಮ್ಮ ಕೇರ್‌ ಆಕೆಗೆ ತುಂಬಾ ಇಷ್ಟವಾಗುವುದು. ನಿಮ್ಮ ಪ್ರೀತಿಯನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಳ್ಳುವುದಕ್ಕಿಂತ ಆಕೆ ಬಳಿ ವ್ಯಕ್ತಪಡಿಸಿ.

ರಸ್ತೆ ದಾಟುವಾಗ ಆಕೆಯ ಕೈ ಹಿಡಿದರೆ ನಿಮ್ಮ ಪ್ರೀತಿಯಲ್ಲಿ ಆಕೆ ಕರಗಿ ಹೋಗಿ ಬಿಡುತ್ತಾಳೆ. ಅವಳ ಇಷ್ಟದ ಐಸ್‌ಕ್ರೀಮ್, ಸ್ನ್ಯಾಕ್ಸ್‌, ತಿಂಡಿ ಇವುಗಳನ್ನು ತಿಳಿದುಕೊಂಡು ಅದನ್ನು ಆಕೆಗೆ ಕೊಡಿಸಿ, ಅವಳ ಇಷ್ಟದ ಅಡುಗೆಯನ್ನು ನೀವೇ ಮಾಡಿ ಬಡಿಸಿದರೆ ತುಂಬಾ ಖುಷಿ ಪಡುವವಳು. ಮಲಗುವ ಮುನ್ನ ಸಂಗಾತಿಗೆ ಪ್ರೀತಿಯ ಅಪ್ಪುಗೆ ನೀಡಿ.

Leave a Reply

Your email address will not be published. Required fields are marked *