ಬರದ ನಾಡಲ್ಲೂ ರೈತರ ಕೈ ಹಿಡಿದ ದ್ರಾಕ್ಷಿ..!

ಕೊಪ್ಪಳ : ಕೊಪ್ಪಳಕ್ಕೂ ಬರಕ್ಕೂ ಒಂಥರಾ ಅವಿನಾಭಾವ ಸಂಬಂಧ. ಅನೇಕ ವರ್ಷಗಳಿಂದ ಜಿಲ್ಲೆಯ ರೈತರನ್ನ ಬರವೆಂಬ ಶಾಪ ಕಿತ್ತು ತಿನ್ನುತ್ತಿದೆ. ಬರಕ್ಕೆ ಹೆದರಿ ಅನೇಕ ರೈತರು ಬೇಸಾಯವನ್ನೇ ಬಿಟ್ಟ ಉದಾಹರಣೆಗಳು ಇವೆ. ಆದ್ರೇ ಇದಕ್ಕೆ ತದ್ವಿರುದ್ದವಾಗಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಅತ್ಯುತ್ತಮ ಬೆಳೆ ತೆಗೆಯುವ ಮೂಲಕ ಉತ್ತಮ ಜೀವನವನ್ನ ರೂಪಿಸಿಕೊಂಡಿದ್ದಾರೆ. ಹನಿ ನೀರಾವರಿ ಪದ್ಧತಿಯನ್ನ ಅಳವಡಿಸಿಕೊಂಡು ಬರೋಬ್ಬರಿ 664 ಹೇಕ್ಟರ್ ಪ್ರದೇಶದಲ್ಲಿ ದ್ರಾಕ್ಷಿಯನ್ನ ಬೆಳೆದಿದ್ದಾರೆ.

ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ 156 ಹೆ., ಕೊಪ್ಪಳ-11 ಹೆ., ಕುಷ್ಟಗಿ-156 ಹೆ. ಮತ್ತು ಯಲಬುರ್ಗಾದಲ್ಲಿ-341 ಹೆಕ್ಟೇರ್ ಪ್ರದೇಶದಲ್ಲಿ ಥಾಮ್ಸನ್ ಸೀಡಲೇಸ್, ಸೋನಾಕಾ, ಮಾಣಿಕ್ ಚಮನ್, ಸೂಪರ್ ಸೋನಾಕಾ, ತಾಸ್ ಗಣೇಶ್, ಕ್ಲೋನ್ 192, ನೇರಳೆ ದ್ರಾಕ್ಷಿಯ ಶರದ್ ಸೀಡ್‌ಲೇಸ್, ಕೃಷ್ಣಾ ಶರದ್, ಶರದ್ ಜಂಬೂ ಸೇರಿದಂತೆ ಇತರೆ ತಳಿಯ ದ್ರಾಕ್ಷಿಗಳನ್ನು ರೈತರು ಬೆಳೆದಿದ್ದಾರೆ. ಪ್ರತಿ ಹೆಕ್ಟೇರ್‌ಗೆ 16.81 ಮೆಟ್ರಿಕ್ ಟನ್‌ವರೆಗೂ ದ್ರಾಕ್ಷಿ ಇಳುವರಿ ದೊರೆಯುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಸರಾಸರಿ ಕೆ.ಜಿ 30 ರೂ. ದೊರೆಯುತ್ತಿದೆ.

Leave a Reply

Your email address will not be published. Required fields are marked *