ಗೊಂಬೆಗಳ ತಯಾರಿಕೆ ಕೌಶಲ್ಯ ತರಬೇತಿ, 6250 ಜನರಿಗೆ ಉದ್ಯೋಗ ನಿರೀಕ್ಷೆ : ಸಚಿವ ಜಾರ್ಜ್

ಕೊಪ್ಪಳ : ಏಕಸ್ ಟಾಯ್ ಕ್ಲಸ್ಟರ್‌ನಲ್ಲಿ ಮಾರ್ಚ್ನಿಂದ ಗೊಂಬೆಗಳ ಉತ್ಪಾದನೆ ಆರಂಭವಾಗಲಿದ್ದು ಇಲ್ಲಿಗೆ ಅಗತ್ಯವಿರುವ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡಿ ಸ್ಥಳೀಯರಿಗೆ ಉದ್ಯೊಗಾವಕಾಶ ಕಲ್ಪಿಸಲಾಗುತ್ತದೆ ಎಂದು ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ರವರು ತಿಳಿಸಿದರು.

ಕೊಪ್ಪಳ ಜಿಲ್ಲೆಯ ಕುಕನೂರು ಬಳಿ ಸುಮಾರು 252 ಎಕರೆ ಪ್ರದೇಶದಲ್ಲಿ ಏಕಸ್ ಟಾಯ್ ಕ್ಲಸ್ಟರ್‌ಗೆ ಭೇಟಿ ನೀಡಿ ಪರಿಶೀಲನೆ ವೇಳೆ ತಿಳಿಸಿದರು. ಗ್ಲೊಬಲ್ ಮಟ್ಟದ ಉತ್ಪಾದನಾ ಕ್ಲಸ್ಟರ್ ಇದಾಗಿದ್ದು ಇಲ್ಲಿ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಆಗಮಿಸಿದ್ದು ವಿಶೇಷವಾಗಿ ರಫ್ತು ಮಾಡುತಕ್ಕಂತಹ ಗೊಂಬೆಗಳ ಉತ್ಪಾದನೆ ಮಾಡಲಿವೆ. ಇದರ ಕಾರ್ಯಾರಂಭ 2020ರ ಮಾರ್ಚ್ನಿಂದ ಆಗಲಿದ್ದು ಅಗತ್ಯವಿರುವ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಕೊಪ್ಪಳ ಜಿಲ್ಲೆಯ ಜನರಿಗೆ ಆದ್ಯತೆ ನೀಡಲಿದ್ದು ಮೊದಲ ಹಂತದಲ್ಲಿ 2019ರ ಡಿಸೆಂಬರ್‌ನಿಂದ 6250 ಜನರಿಗೆ ತರಬೇತಿ ನೀಡುವ ಮೂಲಕ ಇಲ್ಲಿಯೇ ಉದ್ಯೊಗಾವಕಾಶವನ್ನು ಕಲ್ಪಿಸಲಾಗುತ್ತದೆ. ಜಿಲ್ಲೆಯ ಜನರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಅವರು ತಿಳಿಸಿದರು.

ತಳಕಲ್ ಜೋಳದ ರವೆ ಉತ್ಪಾದನಾ ಘಟಕಕ್ಕೆ ಭೇಟಿ

ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಜೋಳದಿಂದ ರವೆ ಮಾಡುವ ಘಟಕವನ್ನು ತಳಕಲ್‌ನಲ್ಲಿ ಆರಂಭಿಸಲಾಗಿದೆ. ಜೋಳದಿಂದ ರವೆ ತಯಾರಿಸಿ ವಿವಿಧ ಖಾದ್ಯವನ್ನು ಸಿದ್ದಪಡಿಸುವುದರಿಂದ ಆರೋಗ್ಯದ ಮೇಲೆ ಅತ್ಯುತ್ತಮ ಪರಿಣಾಮ ಬೀರಲಿದೆ.

ಕೃಷ್ಣ ಕುಲ ಎಂಬುವವರು ಜೋಳದಿಂದ ರವೆ ತಯಾರಿಸುವ ಘಟಕ ಆರಂಭಿಸಿದ್ದಾರೆ. ಮಾನ್ಯ ಸಚಿವರು ಘಟಕವನ್ನು ಉದ್ಘಾಟಿಸಿದರು. ಈ ವೇಳೆ ಅತ್ಯುತ್ತಮ ಘಟಕ ಇದಾಗಿದ್ದು ಇಲ್ಲಿ ತಯಾರಿಸುವ ಜೋಳದ ರವೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಈ.ತುಕಾರಾಂ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.   

Leave a Reply

Your email address will not be published. Required fields are marked *