ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ

ಗಂಗಾವತಿ : ವಿಶ್ವಕಂಡ ಹಿರಿಯ ರಂಗಕರ್ಮಿ ಹಾಗು ಹೆಸರಾಂತ ನಟ, ನಿರ್ದೇಶಕ, ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಹಿರಿಯ ರಂಗ ವಿಜ್ಞಾನಿ ಹಾಲ್ಕುರ್ಕಿ ಶಿವಶಂಕರ್, ಕಲಾ ಪೋಷಕ ರೇವಣ ಸಿದ್ದಯ್ಯ ತಾತಾ, ಹೆಜ್ಜೆ ಗೆಜ್ಜೆ ಕಲಾ ಸಂಘದ ನಾಗರಾಜ್ ಇಂಗಳಗಿ, ಶ್ರೀ ನೀಲಕಂಠೇಶ್ವರ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ವಿರುಪಾಕ್ಷಪ್ಪ ಶಿರವಾರ ಇವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರತಿಭಾವಂತರಾಗಿದ್ದ ಗಿರೀಶ್ ಕಾರ್ನಡ್ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದು, ಕಾರ್ನಾಡ್ ಅವರ ನಾಟಕಗಳು ಅಧುನಿಕ ಸಮಾಜದ ಓರೆಕೋರೆಗಳನ್ನು ಜಗತ್ತಿಗೆ ತಿಳಿಯಪಡಿಸಿದವರಲ್ಲದೆ, ವಿಶ್ವದ ಅನೇಕ ಭಾಷೆಗಳಲ್ಲಿ ಈ ನಾಟಕ ಅನುವಾದಗೊಳ್ಳುವ ಮೂಲಕ ವಿಶ್ವ ರಂಗ ಶ್ರೀಮಂತಿಕೆಯನ್ನು ಹೆಚ್ಚಿಸಿದವು. ಅವರ ಅಗಲಿಕೆ ವಿಶ್ವ ರಂಗಭೂಮಿಯನ್ನು ಬಡವಾಗಿಸಿದೆ ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *