ಫ್ರೆಂಚ್ ಓಪನ್ ಫೈನಲ್ ಗೆ ಲಗ್ಗೆ ಇಟ್ಟ ಕ್ಲೇ ಕೋರ್ಟ್ ಕಿಂಗ್

ಪ್ಯಾರೀಸ್ : ಕ್ಲೇ ಕೋರ್ಟ್ ಕಿಂಗ್ ರಾಫೆಲ್ ನಡಾಲ್ ಫ್ರೆಂಚ್ ಓಪನ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ 12 ನೇ ಬಾರಿಗೆ ಫೈನಲ್ ಪ್ರವೇಶಿಸಿ ನಡಾಲ್ ದಾಖಲೆ ಮಾಡಿದ್ದಾರೆ. ಸೆಮಿಫೈನಲ್ ನಲ್ಲಿ ನಡಾಲ್ ರೋಜರ್ ಫೆಡರರ್ ವಿರುದ್ಧ 6-3, 6-4, 6-2 ನೇರ ಸೆಟ್ ಗಳಿಂದ ಗೆಲುವು ದಾಖಲಿಸಿದರು. ಈ ಮೂಲಕ 12 ನೇ ಬಾರಿಗೆ ಫೈನಲ್ ಪ್ರವೇಶಿಸಿದ ನಡಾಲ್ ಇದುವರೆಗೂ 11 ಸಲ ಫ್ರೆಂಚ್ ಓಪನ್ ಸಾಮ್ರಾಟನಾಗಿ ಮೆರೆದಿದ್ದಾರೆ. ಹಾಗಾಗಿ ಭಾನುವಾರ ನಡೆಯುವ ಫೈನಲ್ ನಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಠಿಸುವ ತವಕದಲ್ಲಿದ್ದಾರೆ.

Leave a Reply

Your email address will not be published. Required fields are marked *