ಈ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಂತೆ..!

ಲೈಂಗಿಕತೆ ಜೀವನದ ಅವಿಭಾಜ್ಯ, ಸಂಗಾತಿಯೊಂದಿಗೆ ಕಳೆಯುವ ಸುಂದರ ಕ್ಷಣಗಳು ಅವು. ಈ ಹಿಂದೆಲ್ಲಾ ಪುರುಷರು ಮಹಿಳೆಯರ ಪೈಕಿ ಯಾರಲ್ಲಿ ಲೈಂಗಿಕ ಆಸಕ್ತಿ ಹೆಚ್ಚು ಎನ್ನುವ ಬಗ್ಗೆಯೆಲ್ಲ ಅಧ್ಯಯನ ನಡೆದಿವೆ. ಅದರಲ್ಲಿ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಆಸಕ್ತಿ ಮತ್ತು ನಿರೀಕ್ಷೆಗಳಿವೆ ಎಂದು ಅಧ್ಯಯನಗಳು ತಿಳಿಸಿವೆ.

ಈಗ ಹೊಸದೊಂದು ಅಧ್ಯಯನದ ವರದಿ ಹೊರ ಬಂದಿದ್ದು ಮಹಿಳೆಯರಲ್ಲಿ ಅದರಲ್ಲೂ ರೆಡ್ ವೈನ್ ಕುಡಿಯುವ ಮಹಿಳೆಯಲ್ಲಿ ಹೆಚ್ಚು ಲೈಂಗಿಕ ಆಸಕ್ತಿ ಕಾಣಬಹುದು ಎಂದು ತಜ್ಞರು ಹೇಳಿದ್ದಾರೆ. ಮಿತ ಪ್ರಮಾಣದಲ್ಲಿ ರೆಡ್ ವೈನ್ ಕುಡಿಯುವರು ಸಾಮಾನ್ಯ ಮಹಿಳೆಯರಿಗಿಂತ ಹೆಚ್ಚಿನ ಉತ್ಸಾಹ ಲೈಂಗಿಕತೆಯಲ್ಲಿ ಹೊಂದಿರುತ್ತಾರೆ. ಬೇರೆ ಆಲ್ಕೊಹಾಲ್‌ಗೆ ಹೋಲಿಸಿದರೆ ರೆಡ್ ವೈನ್ ಕಾಮಾಸಕ್ತಿಗೆ ರಾಮಬಾಣವಂತೆ.

ಇಟಲಿಯಲ್ಲಿ ವೈದ್ಯಕೀಯ ತಂಡವೊಂದು ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದ್ದು, ರೆಡ್ ವೈನ್ ನಲ್ಲಿ ಕಂಡು ಬರುವ ರಾಸಾಯನಿಕ ದೇಹದ ಎಲ್ಲಾ ಭಾಗಗಳಿಗೆ ರಕ್ತದ ಸಂಚಲನ ಹೆಚ್ಚಿಸುವ ಪರಿಣಾಮ ಕಾಮ ಹೆಚ್ಚಾಗಲಿದೆ ಎಂದಿದೆ ವೈದ್ಯ ತಂಡ. ಇದರ ಜೊತೆಗೆ ಅತಿಯಾದ ರೆಡ್ ವೈನ್ ಕುಡಿಯುವುದು ಸರಿಯಲ್ಲ ಎಂದು ಸಂಶೋಧನಾ ತಂಡ ಎಚ್ಚರಿಸಿದೆ.

Leave a Reply

Your email address will not be published. Required fields are marked *