ಕಾಂಗ್ರೆಸ್‌ಗೆ ಬಿಗ್ ಶಾಕ್ ಕೊಟ್ಟ ಫೇಸ್‌ಬುಕ್…!

ಲೋಕಸಭಾ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಗೆ ಸಾಮಾಜಿಕ ಜಾಲತಾಣದ ದೊಡ್ಡಣ್ಣ ಫೇಸ್ ಬುಕ್ ಬಿಗ್ ಶಾಕ್ ನೀಡಿದೆ. ಕಾಂಗ್ರೆಸ್ ನ ಐಟಿ ಸೆಲ್ ನೊಂದಿಗೆ ಗುರುತಿಸಿಕೊಂಡಿದ್ದ 687 ಪೇಜ್ ಹಾಗೂ ಖಾತೆಗಳನ್ನು ತೆಗೆದು ಹಾಕಿರುವುದಾಗಿ ಫೇಸ್ ಬುಕ್ ಏ.1 ರಂದು ಘೋಷಿಸಿದೆ. 

ನಕಲಿ ಫೇಸ್ ಬುಕ್ ಖಾತೆಗಳ ವಿರುದ್ಧ ಈಗಾಗಲೇ ಸಂಸ್ಥೆ ಸಮರ ಸಾರಿದ್ದು, ಇಂತಹ ಹಲವು ಖಾತೆಗಳನ್ನು ಫೇಸ್ ಬುಕ್ ಡಿಲೀಟ್ ಮಾಡುತ್ತಿದೆ. ಕಾಂಗ್ರೆಸ್ ನೊಂದಿಗೆ  ಗುರುತಿಸಿಕೊಂಡಿದ್ದ 687 ಖಾತೆಗಳು ಪೇಜ್ ಗಳು ನಕಲಿಯಾಗಿದ್ದರಿಂದ ಅವುಗಳನ್ನು ತೆಗೆದುಹಾಕಲಾಗಿದೆ ಎಂದು ಸ್ವಷ್ಟನೆ ನೀಡಿದೆ.

ಇದಷ್ಟೇ ಅಲ್ಲದೇ ಪಾಕಿಸ್ತಾನ ಮೂಲದ 103 ಪೇಜ್ ಹಾಗೂ ಗ್ರೂಪ್ ಗಳನ್ನು ಫೇಸ್ ಬುಕ್ ಹಾಗೂ ಇನ್ಸ್ಟಾ ಗ್ರಾಮ್ ನಿಂದ ತೆಗೆದುಹಾಕಲಾಗಿದೆ ಎಂದು ಫೇಸ್‌ಬುಕ್ ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *