ಭಾರತದಲ್ಲಿನ ಕುಡುಕರ ಸಂಖ್ಯೆ ಎಷ್ಟು ಗೊತ್ತಾ..? ಇಲ್ನೊಡಿ ಅಚ್ಚರಿಯ ಸಂಗತಿ..!

ಇದು 4G ಕಾಲ, ಒಂದು ಸಮಯ ನಿಂತರೂ ಮೊಬೈಲ್ ಕೈಯಲ್ಲಿ ಹಿಡಿದ ಮನುಷ್ಯ ಒಂದು ಕ್ಷಣವೂ ನಿಲ್ಲುವುದಿಲ್ಲ.. ಆಧುನಿಕತೆಯ ಭರಾಟೆಯಲ್ಲಿ ಸದಾ ಒಂದಿಲ್ಲೊಂದು ಕೆಲಸದಲ್ಲಿ ನಿರತವಾಗಿರುವ ಅವನಿಗೆ ದಣಿವು ಕಾಣೋದು ರಾತ್ರಿ ಮಾತ್ರ.

ಒಂದು ಕ್ಷಣ ಎಲ್ಲವೂ ಮರೆತು ಹಾಯಾಗಿ ಮಲಗಬೇಕು ಜಗತ್ತಿನ ಗೊಡವೆ ಇಲ್ಲದೆ ಚೆಂದ ನಿದ್ರಿಸಬೇಕು ಎಂದು ಇಚ್ಛಿಸುತ್ತಾನೆ. ಈ ಹಿನ್ನೆಲೆ ಪ್ರತಿಯೊಬ್ಬ ತನ್ನ ಮೇಲಿನ ಒತ್ತಡ ನಿವಾರಣೆಗೆ ಒಂದೊಂದು ಚಟವನ್ನು ಅವಲಂಬಿಸಿದ್ದಾರೆ. ಕೆಲವರು ಗುಟಕಾ ಪಾನ್ ಮಸಾಲ್ ಅಗೆದರೆ ಇನ್ನು ಕೆಲವರು ತಮ್ಮ ಟೆನ್ಶನ್ ನಿವಾರಣೆಗೆ ಒಂದು ದಮ್ಮು ಹೊಡೆಯುತ್ತಾರೆ.

ಇನ್ಮು ಕೆಲವರಿಗಿಂತೂ ತಮ್ಮ ದಿನದ ಒತ್ತಡ ನಿಗಿಸಲು ಒಂದು ಪೆಗ್ ಎಣ್ಣೆ ಒಳಗೆ ಹೋಗಲೇಬೇಕು. ಹೀಗೆ ಭಾರತದಲ್ಲಿ ಎಷ್ಟು ಪ್ರಮಾಣದ ಕುಡುಕರಿದ್ದಾರೆ ಎನ್ನುವ ಮಾಹಿತಿ‌ ಕೆದಕಿದಾಗ ಸಿಕ್ಕಿದ್ದು ಭಾರತದಲ್ಲಿ ಬರೊಬ್ಬರಿ 16 ಕೋಟಿ ಜನರು ಕುಡುಕರಿದ್ದಾರೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಮಾಹಿತಿ ಪ್ರಕಾರ 10 ರಿಂದ 75 ವರ್ಷದೊಳಗಿನ 16 ಕೋಟಿ ಭಾರತೀಯರು ಮಧುಪಾನ ಮಾಡುತ್ತಾರೆ. ಪ್ರತಿ 38 ವ್ಯಕ್ತಿಗಳ ನಡುವೆ ಒಬ್ಬರಲ್ಲಿ ಯಾವುದಾದರೂ ಒಂದು ರೀತಿಯ ಮದ್ಯಪಾನ ಮಾಡುವ ಹವ್ಯಾಸ ಇದೆಯಂತೆ.

ಇನ್ನೂ ಕಳೆದ ಒಂದು ವರ್ಷದಲ್ಲಿ 3.1 ಕೋಟಿಯಷ್ಟು ಜನರು ಮದ್ಯಪಾನದ ಜೊತೆಗೆ ಗಾಂಜಾ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿವೆ.

Leave a Reply

Your email address will not be published. Required fields are marked *