ಆಸೀಸ್ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು

ಲಂಡನ್ : ಭಾನುವಾರ ವಿಶ್ವಕಪ್ ನ 2ನೇ ಪಂದ್ಯವನ್ನಾಡಿದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಕೊಹ್ಲಿ ಪಡೆ ವಿಶ್ವಕಪ್ ಟೂರ್ನಿಯಲ್ಲಿ ಸತತ 2 ನೇ ಗೆಲುವು ದಾಖಲಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬ್ಲೂಬಾಯ್ಸ್ ಆರಂಭದಲ್ಲೇ ಶಿಖರ್ ಧವನ್ (117) ಭರ್ಜರಿ ಶತಕ, ರೋಹಿತ್ ಶರ್ಮಾ (57), ರನ್ ಗಳ ಜೊತೆಯಾಟ ತಂಡಕ್ಕೆ ಭದ್ರ ಅಡಿಪಾಯವನ್ನು ಹಾಕಿಕೊಟ್ಟಿತು. ಬಳಿಕ ನಾಯಕ ವಿರಾಟ್ ಕೊಹ್ಲಿ (82) ಹಾಗೂ ಹಾರ್ದಿಕ್ ಪಾಂಡ್ಯ (48) ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 50 ಓವರ್ ಗಳಲ್ಲಿ 352 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.

ಬಳಿಕ ಈ ದೊಡ್ಡ ಮೊತ್ತವನ್ನು ಗುರಿ ಬೆನ್ನಟ್ಟಿದ ಆಸೀಸ್ ತಂಡಕ್ಕೆ ಡೇವಿಡ್ ವಾರ್ನರ್ (56), ಸ್ಟಿವನ್ ಸ್ಮಿತ್ (69) ಹಾಗೂ ಅಲೆಕ್ಸ್ ಕ್ಯಾರಿ (55) ಅರ್ಧಶತಕಗಳ ಹೊರತಾಗಿಯೂ ಆಸೀಸ್ 316 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು ಸೋಲನುಭವಿಸಿತು. ಈ ಮೂಲಕ ಕೊಹ್ಲಿ ಪಡೆ ಆಸೀಸ್ ವಿರುದ್ಧ 36 ರನ್ ಗಳ ಭರ್ಜರಿ ಗೆಲುವು ದಾಖಲಿಸಿತು.

Leave a Reply

Your email address will not be published. Required fields are marked *