ಅಡ್ಡಗೋಡೆ ಮೇಲೆ ದೀಪವಿಟ್ಟ ಪಾಕ್ ಸಚಿವ..!

ಭಾರತ ಕೊಟ್ಟ ಪೆಟ್ಟಿಗೆ ಬೆಚ್ಚಿರುವ ಪಾಕಿಸ್ತಾನ ಇದೀಗ ಶಾಂತಿ ಮಂತ್ರ ಜಪಿಸ್ತಿದೆ. ಪೈಲಟ್‌ ಅಭಿನಂದನ್‌ ಕುಟುಂಬದವರಿಗೆ ಪಾಕ್ ಅಭಯ ನೀಡಿದ್ದು, ಭಾರತದ ವಿಂಗ್‌ ಕಮಾಂಡರ್‌ ಸೇಫ್ ಆಗಿದ್ದಾರೆ. ಅವರು ನಮ್ಮ ರಕ್ಷಣೆಯಲ್ಲಿದ್ದು, ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಅಂತಾ ಪಾಕ್‌ ವಿದೇಶಾಂಗ ಸಚಿವ ಶಾ ಮಹ್ಮದ್‌ ಖುರೇಷಿ ಸ್ಪಷ್ಟನೆ ನೀಡಿದ್ದಾರೆ.

ಭಾರತದ ಕಮಾಂಡರ್‌ ಅಭಿನಂದನ್‌ರನ್ನ ಜಿನೇವಾ ಒಪ್ಪಂದದ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತದೆ. ಆದರೆ ಅವರನ್ನ ವಾಪಸ್ ಕಳುಹಿಸುವ ಬಗ್ಗೆ ಪ್ರಸ್ತಾಪಿಸದ ಪಾಕ್‌ ವಿದೇಶಾಂಗ ಸಚಿವರು, ಸಂಧಾನ ಮಾತುಕತೆ ನಡೆಸೋಣ ಅಂದಿದ್ದಾರೆ. ಇನ್ನು, ಮಾತುಕತೆ ನಂತರ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ತಮಗೆ ಭಾರತ ನೀಡಿರುವ ಸಾಕ್ಷ್ಯಾಧಾರಗಳು ಸಿಕ್ಕಿವೆ. ಭಾರತದ ಸಾಕ್ಷ್ಯಾಧಾರಗಳನ್ನು ನೋಡಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಅಂತಾ ಪಾಕ್ ವಿದೇಶಾಂಗ ಸಚಿವ ಶಾ ಮಹ್ಮದ್ ಖುರೇಷಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *