ಅ.17 ರಿಂದ ಹೊಸಪೇಟೆ ಕೊಟ್ಟೂರು ಪ್ಯಾಸೆಂಜರ್ ರೈಲು ಆರಂಭ

ಹೊಸಪೇಟೆ : ಅ.17 ರಿಂದ ಹೊಸಪೇಟೆ-ಕೊಟ್ಟೂರು ನಡುವೆ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಲಿದೆ.ಈ ಭಾಗದ ಪ್ರಯಾಣಿಕರ ಎರಡು ದಶಕದ ಕನಸು ಈ ಮೂಲಕ ನನಸಾಗಲಿದೆ.

ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ಯಾಸೆಂಜರ್ ರೈಲು ಓಡಾಟಕ್ಕೆ ಚಾಲನೆ ನೀಡಲಿದ್ದಾರೆ. 1995ರಲ್ಲಿ ಹೊಸಪೇಟೆ-ಕೊಟ್ಟೂರು ಮಾರ್ಗದಲ್ಲಿ ಬ್ರಾಡ್‍ಗೇಜ್ ಪರಿವರ್ತನೆಗಾಗಿ ಪ್ಯಾಸೆಂಜರ್ ಸಂಚಾರವನ್ನು ರದ್ದು ಮಾಡಲಾಗಿತ್ತು. ಯಾಕೆಂದರೆ ಸುರಕ್ಷಿತ ದೃಷ್ಟಿಕೋನದಿಂದ ಪ್ಯಾಸೆಂಜರ್ ರೈಲಿಗೆ ಅನುಮತಿಯನ್ನು ನೀಡಿರಲಿಲ್ಲ.

Leave a Reply

Your email address will not be published. Required fields are marked *