6ನೇ ಹಂತದ ಚುನಾವಣೆ : 59 ಕ್ಷೇತ್ರಗಳಲ್ಲಿ ಇಂದು ಮತದಾನ

ನವದೆಹಲಿ : ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಇಂದು ಶುರುವಾಗಿದ್ದು,  ರಾಜಧಾನಿ ದೆಹಲಿ ಸೇರಿದಂತೆ 7 ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ನಡೆಯುತ್ತಿರುವ ಏಳು ಹಂತಗಳ ಲೋಕಸಭಾ ಚುನಾವಣೆಯ ಆರನೇ ಹಂತಕ್ಕೆ ಇಂದು ಮತದಾನ ನಡೆಯಲಿದೆ.

ಉತ್ತರ ಪ್ರದೇಶದ 14, ಹರಿಯಾಣದ 10, ಬಿಹಾರ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಲಾ 8, ದೆಹಲಿಯ 7, ಹಾಗೂ ಜಾರ್ಖಂಡ್‍ನ 4 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ.

Leave a Reply

Your email address will not be published. Required fields are marked *