10 ರುಪಾಯಿ ಸೀರೆಗೆ ಮುಗಿಬಿದ್ದ ನಾರಿ ಮಣಿಯರು

ಹೈದರಾಬಾದ್ : ಹೈದರಾಬಾದ್ ನ ಸಿದ್ದಿಪೇಟ್ ನಲ್ಲಿರುವ ಶಾಪಿಂಗ್ ಮಾಲ್ ನಲ್ಲಿ ಇವತ್ತು  10  ರೂಪಾಯಿ ಸೀರೆಗಾಗಿ ವಿಪರೀತ ಜನ ಸೇರಿದ್ರು. ಇದರಿಂದ ಕಾಲ್ತುಳಿತ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ಹೌದು, ಕೇವಲ 10 ರೂಪಾಯಿಗೆ ಒಂದು ಸೀರೆ ಅಂದ್ರೇ ಕೇಳಬೇಕಾ..? ಇಷ್ಟೊಂದು ಚೀಪಾಗಿ ಕೊಡ್ತಿದ್ದಾರೆ ಅಂತಾ ನಾರಿ ಮಣಿಯರು ನಂಗೊಂದು ಇರಲಿ, ನನ್ ಮಗಳಿಗೊಂದು ಇರಲಿ ಎಂದು ಎದ್ನೋ ಬಿದ್ನೋ ಅಂತಾ ಶಾಂಪಿಗ್ ಮಾಲ್ ಗೆ ಓಡೋಡಿ ಬಂದಿದ್ರು. ಈ ವೇಳೆ ಕ್ಷಣಾರ್ಧದಲ್ಲಿ ಆ ಮಾಲ್ ಮಹಿಳೆಯರಿಂದ ತುಂಬಿ ಹೋಗಿತ್ತು. ಸೀರೆ ಆರಿಸೋ ಭರದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಹಲವಾರು ಮಂದಿ ಮಹಿಳೆಯರು ಗಾಯಗೊಂಡಿದ್ದಾರೆ.

ಈ ಅವಕಾಶವನ್ನ ಉಪಯೋಗಿಸಿಕೊಂಡ ಕಳ್ಳರು ಕೂಡ ತಮ್ಮ ಕೈ ಚಳಕ ತೋರಿಸಿದ್ದಾರೆ. ಒಬ್ಬ ಮಹಿಳೆ ಬಂಗಾರದ ಸರ ಸೇರಿದಂತೆ 6 ಸಾವಿರ ರೂ ಹಣ ಕಳೆದುಕೊಂಡಿದ್ದು, ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *